ಮೃಗಾಲಯಗಳಲ್ಲಿ ಪ್ರಾಣಿಗಳನ್ನು ಇಟ್ಟಿರುವ ಜಾಗಗಳಿಗೆ ಬೇಲಿ ಹಾಕುವುದು ಏಕೆ ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ? ವೀಕ್ಷಕರು ಹಾಗೂ ಖುದ್ದು ಪ್ರಾಣಿಗಳ ಸುರಕ್ಷತೆಯ ದೃಷ್ಟಿಯಿಂದ ಈ ಬೇಲಿಗಳನ್ನು ಹಾಕಲಾಗಿರುತ್ತದೆ.
ಎಷ್ಟೇ ಸುರಕ್ಷತಾ ಕ್ರಮಗಳು ಹಾಗೂ ಸೂಚನೆಗಳಿದ್ದರೂ ಸಹ ಕೆಲವು ಭೇಟಿಗಾರರು ಪ್ರಾಣಿಗಳಿಗೆ ಚೇಷ್ಟೆ ಮಾಡಲು ಮುಂದಾಗುವುದು ಮಾತ್ರ ನಿಲ್ಲೋದಿಲ್ಲ. ಸ್ಯಾನ್ ಡಿಯಾಗೋ ಮೃಗಾಲಯದಲ್ಲಿ ನಡೆದ ಈ ಘಟನೆಯಲ್ಲಿ 2 ವರ್ಷದ ಮಗಳು ಹಾಗೂ ಆಕೆಯ ತಂದೆ ಅಪಾಯದಿಂದ ಪಾರಾಗಿ ಬಂದಿದ್ದಾರೆ.
ಲಿಪ್ಸ್ಟಿಕ್ ಹಾಳಾಗುತ್ತೆ ಅಂತಾ ಮಾಸ್ಕ್ ಧರಿಸದೆ ರಂಪಾಟ ಮಾಡಿದ ಯುವತಿ..!
ವಿದ್ಯುತ್ ತಂತಿಗಳ ಬೇಲಿ ಇದ್ದ ಪ್ರದೇಶದೊಳಗೆ ನುಗ್ಗಿ ಅಲ್ಲಿದ್ದ ಆನೆಯೊಂದಿಗೆ ತನ್ನ ಮಗಳಿಗೆ ಆಟವಾಡಿಸುವ ಹುಚ್ಚುತನ ತೋರಿದ ಈ ವ್ಯಕ್ತಿಯ ವರ್ತನೆ ಕಂಡು ಆ ಆಫ್ರಿಕನ್ ಆನೆಗೆ ಸಿಟ್ಟು ಬಂದಿದೆ. ಸಿಟ್ಟಿನಲ್ಲಿ ಆತನಿಗೆ ಸರಿಯಾಗಿ ಬುದ್ಧಿ ಕಲಿಸಲು ಮುಂದಾದ ಆನೆ ಏನು ಮಾಡಿತು ಎಂದು ಭೇಟಿಗಾರರಲ್ಲಿ ಒಬ್ಬರು ವಿಡಿಯೋ ಮಾಡಿಕೊಂಡಿದ್ದು, ಅದೀಗ ವೈರಲ್ ಆಗಿದೆ.
ತನ್ನ ಈ ಮೂರ್ಖತನದ ವರ್ತನೆಯಿಂದಾಗಿ ಓಸೆ ನವರ್ರಾಟೆ ಎಂಬ ಆ ವ್ಯಕ್ತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
“ಆಫ್ರಿಕಾದ ಆನೆಯೊಂದಿಗೆ ಫೋಟೊ ತೆಗೆದುಕೊಳ್ಳುವ ಆಸೆ ಇತ್ತು,” ಎಂದು ತನಿಖೆ ವೇಳೆ ಆತ ಹೇಳಿಕೊಂಡಿದ್ದಾನೆ.