alex Certify ಹೊಸ ಆರ್ಥಿಕ ವರ್ಷದಿಂದ ಆಗಲಿದೆ ಈ ಮಹತ್ವದ ಬದಲಾವಣೆ: ಉದ್ಯೋಗಿಗಳು, ಪಿಂಚಣಿದಾರರಿಗೆ ಸಿಗಲಿದೆ ರಿಲೀಫ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಆರ್ಥಿಕ ವರ್ಷದಿಂದ ಆಗಲಿದೆ ಈ ಮಹತ್ವದ ಬದಲಾವಣೆ: ಉದ್ಯೋಗಿಗಳು, ಪಿಂಚಣಿದಾರರಿಗೆ ಸಿಗಲಿದೆ ರಿಲೀಫ್​​

ಏಪ್ರಿಲ್​ 1ರಿಂದ ಹೊಸ ಹಣಕಾಸು ವರ್ಷ ಶುರುವಾಗಲಿದೆ. ಹೊಸ ಆರ್ಥಿಕ ವರ್ಷದಿಂದ ಕೆಲ ಸರ್ಕಾರಿ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳು ಆಗಲಿದೆ. ಇದರ ಪರಿಣಾಮ ಶ್ರೀಸಾಮಾನ್ಯನ ಮೇಲೆ ಬೀಳಲಿದೆ. ಅದರಲ್ಲೂ ನೌಕರರು, ಉದ್ಯಮಿಗಳು ಹಾಗೂ ಪಿಂಚಣಿದಾರರ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ.

ಸರ್ಕಾರದ ಹೊಸ ನಿಯಮಾವಳಿಗಳ ಅನ್ವಯ ಪ್ರಸ್ತುತ ದರಗಳು ಹಾಗೂ ಆದಾಯ ತೆರಿಗೆಗಳಲ್ಲಿ ಯಾವುದೇ ಬದಲಾವಣೆಗಳು ಆಗದೇ ಇದ್ದರೂ ಸಹ ಏಪ್ರಿಲ್​ 1ರಿಂದ ಜಾರಿಗೆ ಬರಲಿರುವ ಹೊಸ ಕಾರ್ಮಿಕ ಕಾನೂನು ಕಾಯ್ದೆಯಿಂದಾಗಿ ವೇತನ ರಚನೆಯಲ್ಲಿ ಬದಲಾವಣೆಯಾಗಲಿದೆ. ಹೀಗಾಗಿ ನೌಕರರ ಭವಿಷ್ಯ ನಿಧಿಗೆ ಹೆಚ್ಚಿನ ಮೊತ್ತ ಸೇರಲಿದೆ. ಇದರಿಂದ ನೌಕರರ ಉಳಿತಾಯ ಹೆಚ್ಚಲಿದೆ.

2021-22ನೇ ಸಾಲಿನ ಹೊಸ ಆರ್ಥಿಕ ವರ್ಷದಲ್ಲಿ 2.5 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಪಿಎಫ್​ ಕೊಡುಗೆಯ ಮೇಲೆ ಆದಾಯ ತೆರಿಗೆಯ ಅಡಿಯಲ್ಲಿ ಕೆಲ ತೆರಿಗೆ ನಿಯಮಗಳನ್ನ ವಿಧಿಸಲಾಗಿದೆ. ಅಂದರೆ ತಿಂಗಳಿಗೆ 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯ ಪಡೆಯುವವರು ಈ ತೆರಿಗೆ ನಿಯಮದ ಅಡಿಯಲ್ಲಿ ಬರಲಿದ್ದಾರೆ.
75 ವರ್ಷ ಮೇಲ್ಪಟ್ಟ ಪಿಂಚಣಿದಾರರಿಗೆ ಐಟಿಆರ್​ ಸಲ್ಲಿಸಲು ವಿನಾಯಿತಿ ನೀಡಲಾಗಿದೆ. ಈ ಸೌಲಭ್ಯವು ಪಿಂಚಣಿ ಹಾಗೂ ಅದರಿಂದ ಗಳಿಸಿದ ಬಡ್ಡಿಗೆ ಮಾತ್ರ ವಿನಾಯಿತಿ ನೀಡಲಿದೆ.

ಎಲ್​ಟಿಸಿ ವೋಚರ್​ನ ಅಡಿಯಲ್ಲಿ ನೌಕರರಿಗೆ ಸಿಗುವ ವಿನಾಯಿತಿಯ ಅವಧಿ ಮಾರ್ಚ್ 31ರವರೆಗೆ ಮಾತ್ರ ಇರಲಿದೆ. ಏಪ್ರಿಲ್​ 1ರಿಂದ ಇದರ ಲಾಭ ನಿಮಗೆ ಸಿಗೋದಿಲ್ಲ.

ಬ್ಯುಸಿನೆಸ್​ ಟು ಬ್ಯುಸಿನೆಸ್​ನ ಅಡಿಯಲ್ಲಿ 1 ಏಪ್ರಿಲ್​​ನಿಂದ ಇ ಇನ್​​ವೈಸ್​​ ಅನಿವಾರ್ಯವಾಗಿರಲಿದೆ. ಇದರ ಟರ್ನ್​ಓವರ್​​ 50 ಕೋಟಿ ರೂಪಾಯಿಗಿಂತ ಅಧಿಕ ಇದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...