alex Certify ಮೈ ಝುಂ ಎನಿಸುತ್ತೆ ಜ್ವಾಲಾಮುಖಿ ಸ್ಫೋಟದ ಡ್ರೋಣ್​ ದೃಶ್ಯಾವಳಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈ ಝುಂ ಎನಿಸುತ್ತೆ ಜ್ವಾಲಾಮುಖಿ ಸ್ಫೋಟದ ಡ್ರೋಣ್​ ದೃಶ್ಯಾವಳಿ..!

ಜ್ವಾಲಾಮುಖಿ ಸ್ಫೋಟ ಅಂದರೇನೆ ಸಾಕು ಅದು ಎಷ್ಟು ಭಯಾನಕ ಅನ್ನೋದನ್ನ ನಾವು ಊಹಿಸಿಕೊಳ್ಳಬಹುದು. ಅದೇ ರೀತಿ ಯುರೋಪ್​ನ ಐಸ್​ಲ್ಯಾಂಡ್​ನಲ್ಲಿ ಬರೋಬ್ಬರಿ 900 ವರ್ಷಗಳ ಬಳಿಕ ಜ್ವಾಲಾಮುಖಿ ಸ್ಫೋಟಗೊಂಡಿದೆ. ಈಗಾಗಲೇ ಈ ಜ್ವಾಲಾಮುಖಿ ಸ್ಫೋಟದ ಸಾಕಷ್ಟು ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಟ್ರಾವೆಲ್​ ಬ್ಲಾಗರ್​ ಆಗಿರುವ ಜಾರ್ನ್ ಸ್ಟೈನ್ಬೆಕ್ ಎಂಬವರು ಫಾಗ್ರಾಡಾಲ್ಸ್‌ಫಾಲ್ ನಲ್ಲಿ ನಡೆದ ಜ್ವಾಲಾಮುಖಿ ಸ್ಫೋಟದ ಸಾಕಷ್ಟು ವಿಡಿಯೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ. ಎಬಿಸಿ ನ್ಯೂಸ್​ನ ವರದಿಯ ಪ್ರಕಾರ ಈ ಲಾವಾರಸವು ಎಷ್ಟು ಪ್ರಕಾಶಮಾನವಾಗಿತ್ತು ಅಂದರೆ ಜ್ವಾಲಾಮುಖಿ ಸ್ಫೋಟ ನಡೆದ ಸ್ಥಳದಿಂದ 32 ಕಿಲೋಮೀಟರ್ ದೂರದಲ್ಲಿರುವ ರೆಕ್​ಜಾವಿಕ್​​ನಲ್ಲೂ ಲಾವಾರಸ ಪ್ರಕಾಶಮಾನವಾಗಿ ಗೋಚರವಾಗಿದೆ.

ಜ್ವಾಲಾಮುಖಿ ಸ್ಫೋಟದ ಡ್ರೋಣ್​ ದೃಶ್ಯಾವಳಿಗಳು ಸಿಕ್ಕಾಪಟ್ಟೆ ವೈರಲ್​ ಆಗಿದೆ. ಫೋಟೋ ಗ್ರಾಫರ್​ ಹಾಗೂ ಯುಟ್ಯೂಬರ್​ ಆಂಥೋನಿ ಕ್ವಿಂಟಾನೋ ಟ್ವಿಟರ್​ನಲ್ಲಿ ವಿಡಿಯೋ ಶೇರ್ ಮಾಡಿ, ವಾವ್​..! ಫಾಗ್ರಾಡಾಲ್ಸ್​ಫಾಲ್​ನಲ್ಲಿ ನಡೆದ ಜ್ವಾಲಾಮುಖಿ ಸ್ಫೋಟದ ಡ್ರೋಣ್​ ದೃಶ್ಯಾವಳಿ. ಕೊನೆಯವರೆಗೂ ಈ ವಿಡಿಯೋ ನೋಡಿ ಎಂದು ಶೀರ್ಷಿಕೆ ನೀಡಿದ್ದಾರೆ.

https://www.facebook.com/steinbekk/videos/10224917275784355/?t=12

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...