ಸಾಮಾಜಿಕ ಜಾಲತಾಣಗಳ ಮೂಲಕ ಸಾಮಾನ್ಯ ಜನತೆಯೊಂದಿಗೆ ಯಾವಾಗಲೂ ಕನೆಕ್ಟ್ ಆಗಿರುವ ಉದ್ಯಮಿ ಆನಂದ್ ಮಹಿಂದ್ರಾ ಟ್ವಿಟರ್ನಲ್ಲಿ ಯಾವಾಗಲೂ ಆಸಕ್ತಿಕರವಾದ ಟ್ವೀಟ್ಗಳನ್ನು ಮಾಡುತ್ತಿರುತ್ತಾರೆ.
ಟೀಂ ಇಂಡಿಯಾ ಏನಾದರೂ ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದಲ್ಲಿ ಅಕ್ಷರ್ ಪಟೇಲ್ರ ಶೇಡ್ಗಳನ್ನು ಧರಿಸಿಕೊಂಡು ಸೆಲ್ಫಿ ತೆಗೆದುಕೊಂಡು ಪೋಸ್ಟ್ ಮಾಡುವೆ ಎಂದಿದ್ದ ಆನಂದ್ ಇದೀಗ ತಮ್ಮ ಮಾತಿನಂತೆ ನಡೆದುಕೊಂಡಿದ್ದಾರೆ.
130 ಕೋಟಿ ನಕಲಿ ಖಾತೆಗಳನ್ನು ಡಿಲೀಟ್ ಮಾಡಿದ ಫೇಸ್ಬುಕ್
“ಓಕೆ, ನನ್ನ ಮಾತನ್ನು ಪೂರೈಸಬೇಕಿದೆ. ’ಅಕ್ಷರ್’ ಶೇಡ್ಗಳೊಂದಿಗೆ ಸೆಲ್ಫಿ ತೆಗೆಯುವ ಪ್ರಾಮಿಸ್ ಮಾಡಿದ್ದು ಇಲ್ಲಿದೆ. ನನ್ನ ಅದೃಷ್ಟದ ಚಾರ್ಮ್ ಇದು, ತನ್ನ ಬೆಲೆ ಏನು ಎಂದು ಸಾಬೀತುಪಡಿಸಿದೆ” ಎಂದು ಮಹಿಂದ್ರಾ ಈ ಸೆಲ್ಫಿಯೊಂದಿಗೆ ಟ್ವೀಟ್ ಮಾಡಿದ್ದಾರೆ.
“ನಾವು ಸರಣಿ ಗೆದ್ದರೆ ಒಂದು ಜೊತೆ ’ಅಕ್ಷರ್’ರ ಶೇಡ್ಗಳನ್ನು ತೆಗೆದುಕೊಳ್ಳಲಿದ್ದೇನೆ ಎಂದು ಹೇಳಿದ್ದೆ. ಈಗ ಒಂದು ಜೋಡಿ ತೆಗೆದುಕೊಂಡಿದ್ದೇನೆ (ಸ್ಪೋರ್ಟಿಂಗ್ ಟೂಲ್ ರಿಲಿಶ್) & ಇಂದು ರಾತ್ರಿ ಮ್ಯಾಚ್ ನೋಡಲು ಉತ್ಸುಕನಿದ್ದೇನೆ. ಟಿವಿಯಲ್ಲಿ ವೀಕ್ಷಿಸಲು ಶೇಡ್ಸ್ ಬೇಕಿಲ್ಲ ಎಂದು ನನಗೆ ಗೊತ್ತು & ನಾನು ಕ್ರೇಜಿ ಎಂದು ನನ್ನ ಮಡದಿ ಅಂದುಕೊಂಡಿದ್ದಾಳೆ, ಆದರೆ ಇದು ಶುಭಶಕುನವಾಗಲಿದೆ” ಎಂದು ಮಹಿಂದ್ರಾ ಆರು ದಿನಗಳ ಹಿಂದೆ ಟ್ವೀಟ್ ಮಾಡಿದ್ದರು.