ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಸಾಮಾನ್ಯ ಅಧಿಕಾರಿಗಳ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಏಪ್ರಿಲ್ 6 ರಂದು ಅಥವಾ ಅದಕ್ಕಿಂತ ಮೊದಲು ಅರ್ಜಿ ಸಲ್ಲಿಸಬಹುದಾಗಿದೆ.
150 ಖಾಲಿ ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಲಾಗಿದೆ. 62 ಹುದ್ದೆಗಳು ಕಾಯ್ದಿರಿಸದ ಹುದ್ದೆಗಳಾಗಿವೆ. ಓಬಿಸಿಗೆ 40, ಎಸ್.ಸಿ.ಗೆ 22, ಇಡಬ್ಲ್ಯೂಎಸ್ 15, ಎಸ್.ಟಿ.ಗೆ 11 ಹುದ್ದೆಗಳು ಮೀಸಲಾಗಿವೆ. ಕನಿಷ್ಠ ಶೇಕಡ 60 ಅಂಕಗಳೊಂದಿಗೆ ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಥವಾ ಸಿಎ / ಐಸಿಡಬ್ಲ್ಯೂಎ / ಸಿಎಫ್ಎ / ನಂತಹ ವೃತ್ತಿಪರ ಅರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ.
ಯುಆರ್ / ಇಡಬ್ಲ್ಯೂಎಸ್ / ಒಬಿಸಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 1180 ರೂ. ಅರ್ಜಿ ಶುಲ್ಕವಿದ್ದು, ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ ನೋಂದಣಿ ಶುಲ್ಕ 118 ರೂ. ಹೆಚ್ಚಿನ ವಿವರಗಳಿಗಾಗಿ ಬ್ಯಾಂಕ್ ಆಫ್ ಮಹಾರಾಷ್ಟ್ರ ಅಧಿಕೃತ ವೆಬ್ ಸೈಟ್ ಗಮನಿಸಬಹುದಾಗಿದೆ ಎನ್ನಲಾಗಿದೆ.