alex Certify ರಾಷ್ಟ್ರ ಧ್ವಜದ ಚಿತ್ರವಿದ್ದ ಕೇಕ್ ಕತ್ತರಿಸುವುದು ಅಪರಾಧವಲ್ಲ, ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಷ್ಟ್ರ ಧ್ವಜದ ಚಿತ್ರವಿದ್ದ ಕೇಕ್ ಕತ್ತರಿಸುವುದು ಅಪರಾಧವಲ್ಲ, ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ

ಚೆನ್ನೈ: ರಾಷ್ಟ್ರೀಯ ಧ್ವಜದ ಚಿತ್ರವಿದ್ದ ಕೇಕ್  ಕತ್ತರಿಸುವುದು ಅಪರಾಧವಲ್ಲ, ಅಗೌರವ ತೋರಿದಂತೆ ಅಲ್ಲ ಎಂದು ಮದ್ರಾಸ್ ಹೈಕೋರ್ಟ್ ಸೋಮವಾರ ತೀರ್ಪು ನೀಡಿದೆ.

ನ್ಯಾಯಮೂರ್ತಿ ಎನ್. ಆನಂದ್ ವೆಂಕಟೇಶ್ ಅವರಿದ್ದ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆದು ತೀರ್ಪು ನೀಡಲಾಗಿದೆ. ಅಶೋಕ ಚಕ್ರದ ವಿನ್ಯಾಸದೊಂದಿಗೆ ರಾಷ್ಟ್ರಧ್ವಜವನ್ನು ಚಿತ್ರಿಸಿದ್ದ ಕೇಕ್ ಕತ್ತರಿಸುವುದು ರಾಷ್ಟ್ರೀಯ ಗೌರವಕ್ಕೆ ಧಕ್ಕೆ ತರುವಂತಹುದಲ್ಲ ಎಂದು ಕೋರ್ಟ್ ಹೇಳಿದೆ.

ಡಿಸೆಂಬರ್ 25, 2013 ರಲ್ಲಿ ಕ್ರಿಸ್ಮಸ್ ದಿನದ ಆಚರಣೆಯಲ್ಲಿ 6 ಅಡಿ ಉದ್ದ ಮತ್ತು 5 ಅಡಿ ಅಗಲದ ಕೇಕ್ ಕತ್ತರಿಸಲಾಗಿತ್ತು. ಇದರಲ್ಲಿ ಭಾರತ ನಕ್ಷೆ ಮತ್ತು ಅಶೋಕ ಚಕ್ರದೊಂದಿಗೆ ತ್ರಿವರ್ಣ ಧ್ವಜ ಹೊಂದಿದ ಚಿತ್ರವೂ ಇತ್ತು. 1000 ಮಕ್ಕಳು ಸೇರಿದಂತೆ ಸುಮಾರು 2500 ಅತಿಥಿಗಳು ಕೇಕ್ ಕತ್ತರಿಸಿ ಸೇವಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೊಯಮತ್ತೂರು ಜಿಲ್ಲಾಧಿಕಾರಿ ಮತ್ತು ಡಿಸಿಪಿ ಕೂಡ ಭಾಗಿಯಾಗಿದ್ದರು.

ಕೇಕ್ ನಲ್ಲಿ ಭಾರತೀಯ ರಾಷ್ಟ್ರೀಯ ಧ್ವಜ ಚಿತ್ರಿಸಿದ್ದು, ಅದು ರಾಷ್ಟ್ರದ ಪ್ರಾತಿನಿಧ್ಯವಾಗಿದೆ. ಅದನ್ನು ಕತ್ತರಿಸುವುದು ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ ಕಾಯ್ದೆ ಅನ್ವಯ ಅಪರಾಧವಾಗಿದೆ ಎಂದು ಹಿಂದೂ ಸಾರ್ವಜನಿಕ ಪಕ್ಷದ ಡಿ. ಸೆಂಥಿಲ್ ಕುಮಾರ್ ದೂರು ಸಲ್ಲಿಸಿದ್ದರು.

ನ್ಯಾಯಮೂರ್ತಿ ಆನಂದ್ ವೆಂಕಟೇಶನ್ ಅವರು, ಭಾರತದಂತಹ ಪ್ರಜಾಪ್ರಭುತ್ವದಲ್ಲಿ ರಾಷ್ಟ್ರೀಯತೆ ಬಹಳ ಮಹತ್ವದ್ದಾಗಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಅದನ್ನು ಅನುಸರಿಸುವುದು ಕೂಡ ಮುಖ್ಯವಾಗಿರುತ್ತದೆ. ದೇಶಭಕ್ತಿ ಎಂದರೆ ಕೇವಲ ಧ್ವಜವನ್ನು ಎತ್ತುವುದಲ್ಲ. ರಾಷ್ಟ್ರೀಯ ಹೆಮ್ಮೆಯನ್ನು ಸಂಕೇತಿಸುವ ಚಿತ್ರಗಳನ್ನು ತೋಳಿನ ಮೇಲೆ ಧರಿಸುವುದಲ್ಲ ಎಂದು ತಿಳಿಸಿದ್ದು, ರವೀಂದ್ರನಾಥ ಠಾಗೋರ್ ಅವರ ಮಾತುಗಳನ್ನು ಉಲ್ಲೇಖಿಸಿ ದೇಶಭಕ್ತಿ ಬಗ್ಗೆ ತೀರ್ಪು ನೀಡಿದ್ದಾರೆ. ರಾಷ್ಟ್ರಧ್ವಜದ ಚಿತ್ರವಿರುವ ಕೇಕ್ ಕತ್ತರಿಸುವುದು ಅಪರಾಧವಲ್ಲ, ಅಗೌರವ ತೋರಿದಂತೆ ಅಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...