ಸೂಪರ್ ಮಾರ್ಕೆಟ್ಗಳಿಗೆ ಹೋದ್ವಿ ಅಂದರೆ ಸಾಕು ಕುರುಕಲು ತಿಂಡಿಗಳಿರುವ ವಿಭಾಗ ನಮ್ಮನ್ನ ಸೆಳೆಯದೇ ಇರದು.
ವಿವಿಧ ಬಗೆಯ ವಿವಿಧ ಬಣ್ಣದ ಪ್ಯಾಕೆಟ್ಗಳಲ್ಲಿ ಇಟ್ಟಿರುವ ಕುರುಕಲು ತಿಂಡಿಗಳು ಗ್ರಾಹಕರನ್ನ ತಮ್ಮತ್ತ ಆಕರ್ಷಿಸುವಲ್ಲಿ ವಿಫಲವಾಗುವ ಉದಾಹರಣೆಗಳು ಬಹಳ ಕಡಿಮೆ. ಆದರೆ ಎಷ್ಟೋ ಮಂದಿ ಮನಸಿದ್ದರೂ ಅಲ್ಲಿಂದ ತಮ್ಮ ಕಣ್ತಪ್ಪಿಸಿ ಬೇರೆ ಕಡೆ ಹೋಗುತ್ತಾರೆ.
ಆದರೆ ನ್ಯೂಯಾರ್ಕ್ನ ಮಳಿಗೆಯೊಂದರಲ್ಲಿ ಕುರುಕಲು ತಿಂಡಿಗಳನ್ನ ರೊಬೋಟ್ ಒಂದು ಹಿಡಿದುಕೊಂಡಿದ್ದು ಗ್ರಾಹಕರ ಹತ್ತಿರತ್ತಿರಕ್ಕೆ ಬಂದು ಅವರನ್ನ ಆಕರ್ಷಿಸುವಲ್ಲಿ ಯಶಸ್ವಿಯಾಗ್ತಿವೆ. ಬಿಲ್ಲಿಂಗ್ ಕೌಂಟರ್ನಲ್ಲಿ ಗ್ರಾಹಕರು ಬರುತ್ತಿದ್ದಂತೆಯೇ ಅದು ಗ್ರಾಹಕರ ಸುತ್ತಲೂ ತಿರುಗಾಡುತ್ತೆ.
ಈ ರೊಬೋಟ್ಗಳಿಗೆ ಮುಖ ಇರೋದಿಲ್ಲ. ಇದು ಮನುಷ್ಯ ಆಕೃತಿಯಲ್ಲಿರುವ ರೊಬೋಟ್ ಅಲ್ಲ. ಬದಲಾಗಿ ಶೆಲ್ಫ್ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ.
ಈ ರೊಬೋಟ್ನಲ್ಲಿರುವ ಸೆನ್ಸಾರ್ನಿಂದಾಗಿ ಅಂಗಡಿಯಲ್ಲಿ ಸುರಕ್ಷಿತವಾಗಿ ಇದು ಸಂಚರಿಸುತ್ತೆ ಹಾಗೂ ಗ್ರಾಹಕ ಕುರುಕಲು ತಿಂಡಿಗಾಗಿ ಆಸೆ ಪಡ್ತಿದ್ದರೆ ಅದನ್ನ ಪತ್ತೆ ಹಚ್ಚುವ ಕಾರ್ಯವನ್ನೂ ಮಾಡುತ್ತದೆಯಂತೆ.