alex Certify ಜೆಸಿಬಿ ಮೂಲಕ ಪವರ್ ಸ್ಟಾರ್ ಮೇಲೆ ಹೂವಿನ ಮಳೆ; ಅಭಿಮಾನಿಗಳ ಪ್ರೀತಿಗೆ ಮನಸೋತ ಪುನೀತ್ ರಾಜ್ ಕುಮಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೆಸಿಬಿ ಮೂಲಕ ಪವರ್ ಸ್ಟಾರ್ ಮೇಲೆ ಹೂವಿನ ಮಳೆ; ಅಭಿಮಾನಿಗಳ ಪ್ರೀತಿಗೆ ಮನಸೋತ ಪುನೀತ್ ರಾಜ್ ಕುಮಾರ್

ಕಲಬುರ್ಗಿ: ಯುವ ಸಂಭ್ರಮಕ್ಕಾಗಿ ಕಲಬುರ್ಗಿಗೆ ಭೇಟಿ ನೀಡಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೇಲೆ ಅಭಿಮಾನಿಗಳು ಬರೋಬ್ಬರಿ 13 ಜೆಸಿಬಿಗಳ ಮೂಲಕ ಹೂವಿನ ಮಳೆಗರೆದು ಸ್ವಾಗತಿಸಿದ್ದಾರೆ.

ಯುವರತ್ನ ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಕಲಬುರ್ಗಿಗೆ ಭೇಟಿ ನೀಡಿದ್ದು, ಈ ವೇಳೆ ಪುನೀತ್ ರಾಜ್ ಕುಮಾರ್, ಪ್ರಸಿದ್ಧ ಶರಣಬಸವೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಮಹಾದಾಸೋಹಿ ಶರಣಬಸವೇಶ್ವರರ ದರ್ಶನ ಪಡೆದರು. ನೆಚ್ಚಿನ ನಟನನ್ನು ನೋಡಲು ಸಾಗರೋಪಾದಿಯಲ್ಲಿ ಪವರ್ ಸ್ಟಾರ್ ಅಭಿಮಾನಿಗಳು ದೇವಾಲಯದ ಬಳಿ ಆಗಮಿಸಿದ್ದಾರೆ.

‘ಪವರ್ ಸ್ಟಾರ್’ ನೋಡಲು ಮುಗಿಬಿದ್ದ ಅಭಿಮಾನಿಗಳು

ದೇವಾಲಯದ ಬಳಿ ಬರುತ್ತಿದ್ದಂತೆಯೇ ಅಭಿಮಾನಿಗಳು ಪವರ್ ಸ್ಟಾರ್ ಮೇಲೆ 13 ಜೆಸಿಬಿಗಳ ಮೂಲಕ ಹೂವಿನ ಮಳೆಗರೆದು ಸ್ವಾಗತಿಸಿದ್ದು ವಿಶೇಷವಾಗಿತ್ತು. ಅಭಿಮಾನಿಗಳ ಪ್ರೀತಿ ಕಂಡು ಪವರ್ ಸ್ಟಾರ್ ನಿಬ್ಬೆರಗಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...