ರೈಲುಗಳಲ್ಲಿ ಮಹಿಳೆಯ ಸುರಕ್ಷತೆಗೆ ಆದ್ಯತೆ ನೀಡುವ ಸಲುವಾಗಿ ಭಾರತೀಯ ರೈಲ್ವೆ ಇಲಾಖೆ ಮಹತ್ವದ ಕ್ರಮಗಳನ್ನ ಕೈಗೊಂಡಿದೆ. ರೈಲುಗಳಲ್ಲಿ ಮಹಿಳೆಯ ವಿರುದ್ಧ ನಡೆಯುವ ಅಪರಾಧಗಳ ತಡೆಗಟ್ಟುವ ಸಲುವಾಗಿ ಭಾರತೀಯ ರೈಲ್ವೆ ಇಲಾಖೆ ವಲಯವಾರು ರೈಲ್ವೆ ಇಲಾಖೆಗಳಿಗೆ ಮಾರ್ಗಸೂಚಿಗಳನ್ನ ಹೊರಡಿಸಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಕೇಂದ್ರ ರೈಲ್ವೆ ಸಚಿವರ ವಕ್ತಾರ, ದೇಶದಲ್ಲಿ ಪ್ರತಿದಿನ ರೈಲಿನಲ್ಲಿ 23 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಇದರಲ್ಲಿ 20 ಪ್ರತಿಶತ ಪ್ರಯಾಣಿಕರು ಮಹಿಳೆಯರಾಗಿದ್ದಾರೆ. ರೈಲ್ವೆ ವ್ಯಾಪ್ತಿಯಲ್ಲಿ ಮಹಿಳೆಯರ ಮೇಲಾಗುವ ಅಪರಾಧಗಳನ್ನ ತಪ್ಪಿಸುವ ಸಲುವಾಗಿ ಹಲವು ಮಹತ್ವದ ಕ್ರಮಗಳನ್ನ ಕೈಗೊಳ್ಳಲಾಗಿದೆ ಎಂದು ಹೇಳಿದ್ರು.
ರೈಲ್ವೆ ಇಲಾಖೆ ಕೈಗೊಳ್ಳಲಿರುವ ಈ ಕ್ರಮಗಳಲ್ಲಿ ಅಲ್ಪಾವಧಿ ಹಾಗೂ ದೀರ್ಘಕಾಲದ ಕ್ರಮಗಳು ಸೇರಿವೆ. ಅಲ್ಪಾವಧಿ ಕ್ರಮಗಳನ್ನ ಆದ್ಯತೆಯ ಆಧಾರದ ಮೇಲೆ ಶೀಘ್ರಗತಿಯಲ್ಲೇ ಜಾರಿಗೆ ತರಲಾಗುತ್ತೆ ಎಂದು ಹೇಳಿದ್ರು.
ಮಹಿಳೆಯರ ಸುರಕ್ಷತೆಗೆ ಒತ್ತು ನೀಡುವ ನಿಟ್ಟಿನಲ್ಲಿ ರೈಲು ಹಾಗೂ ರೈಲ್ವೆ ನಿಲ್ದಾಣ, ಪಾರ್ಕಿಂಗ್ ಏರಿಯಾ, ರೈಲ್ವೆ ಹಳಿಗಳು ಸೇರಿದಂತೆ ಎಲ್ಲಾ ಕಡೆ ಬೆಳಕಿನ ವ್ಯವಸ್ಥೆ ಮಾಡಲಾಗುತ್ತೆ. ಮಾತ್ರವಲ್ಲದೇ ಸಿಬ್ಬಂದಿಗೆ ಐಡಿ ಕಾರ್ಡ್ ಕಡ್ಡಾಯ ಮಾಡೋದು, ಮಹಿಳೆಯರಿಗಾಗಿ ವೇಟಿಂಗ್ ರೂಂ, ಸಿಸಿ ಕ್ಯಾಮರಾ ವ್ಯವಸ್ಥೆ ಸೇರಿದಂತೆ ಇನ್ನೂ ಅನೇಕ ವ್ಯವಸ್ಥೆಗಳನ್ನ ಮಾಡೋದಾಗಿ ಹೇಳಿದ್ದಾರೆ.