ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಬದಲಿಗೆ ಪಶುಗಳಿಗೆ ನೀಡುವ ಪೌಷ್ಟಿಕಾಂಶ ಆಹಾರ ಕಳುಹಿಸಿದ ಘಟನೆ ಪುಣೆಯಲ್ಲಿ ನಡೆದಿದೆ.
ಶ್ರೀಮಂತ ಮಹಾನಗರ ಪಾಲಿಕೆಗಳಲ್ಲಿ ಒಂದಾಗಿರುವ ಮಹಾರಾಷ್ಟ್ರದ ಪುಣೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಶಾಲೆಯೊಂದಕ್ಕೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಬದಲಿಗೆ ಜಾನುವಾರುಗಳಿಗೆ ನೀಡುವ ಪೌಷ್ಠಿಕ ಆಹಾರವನ್ನು ಕಳುಹಿಸಲಾಗಿದೆ.
ವಿದ್ಯಾರ್ಥಿಗಳಿಗೆ ಬಿಸಿಯೂಟದ ಬದಲು ಮೇವು, ಪೌಷ್ಟಿಕಾಂಶ ಆಹಾರ ಕಳುಹಿಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಮುರುಳಿಧರ ಮೋಹನ್ ತಿಳಿಸಿದ್ದಾರೆ.
ಕೊರೋನಾಜಾಸ್ತಿಯಾಗಿ ಲಾಕ್ಡೌನ್ ಜಾರಿಯಾಗಿರುವುದರಿಂದ ಶಾಲೆಗಳನ್ನು ಬಂದ್ ಮಾಡಲಾಗಿದೆ. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಜವಾಬ್ದಾರಿಯನ್ನು ಶಾಲೆಗಳಿಗೆ ವಹಿಸಲಾಗಿದ್ದು, 58 ವಿದ್ಯಾರ್ಥಿಗಳು ಇರುವ ಶಾಲೆಯೊಂದಕ್ಕೆ ಜಾನುವಾರುಗಳಿಗೆ ನೀಡುವ ಪೌಷ್ಠಿಕಾಂಶ ಆಹಾರ ಪೂರೈಕೆ ಮಾಡಲಾಗಿದೆ.