ನವಜಾತ ಶಿಶುವನ್ನ ಬಿಸಿ ನೀರಿನಲ್ಲಿ ಮುಳುಗಿಸಿ ಸಾಯಿಸಿದ ಹಿನ್ನೆಲೆ 29 ವರ್ಷದ ಮಹಿಳೆ ವಿರುದ್ದ ಕೊಲೆ ಮಾಡಿದ ಆರೋಪದಡಿ ಕೇಸ್ ದಾಖಲಿಸಲಾಗಿದೆ. ಘಟನೆ ಇಂಗ್ಲೆಂಡ್ನಲ್ಲಿ ನಡೆದಿದೆ.
ಮಹಿಳೆ ಮನೆಯಲ್ಲಿಯೇ ಮಗುವಿಗೆ ಶುಕ್ರವಾರ ಜನ್ಮ ನೀಡಿದ್ದಳು. ಬಳಿಕ ಆ ಮಗುವನ್ನ ಬಿಸಿ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ ಮಾತ್ರವಲ್ಲದೇ ಮಗುವಿನ ಶವವನ್ನ ಸಮಾಧಿ ಮಾಡಿದ್ದಳು. ಅಪರಾಧಿ ಮಹಿಳೆಯ ಸ್ನೇಹಿತೆ ನೀಡಿದ ಮಾಹಿತಿ ಆಧರಿಸಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ನವಜಾತ ಶಿಶುವನ್ನ ಕುದಿಯುತ್ತಿದ್ದ ನೀರಿನಲ್ಲಿ ಹಾಕಿದ ತಾಯಿ, ಮಗು ಸತ್ತ ಬಳಿಕ ಅದನ್ನ ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿ ಜಮೀನಿನಲ್ಲಿ ಹೂತಿದ್ದಾಳೆ. ಬಳಿಕ ಈ ಘಟನೆ ಬಗ್ಗೆ ಸ್ನೇಹಿತೆ ಬಳಿ ಹೇಳಿಕೊಂಡಿದ್ದು, ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪ್ರಾಥಮಿಕ ತನಿಖೆ ವೇಳೆ ಮಹಿಳೆ ಮಗುವನ್ನ ಆಳವಿಲ್ಲದ ಗುಂಡಿಯಲ್ಲಿ ಹೂತಿದ್ದಳು ಎಂದು ತಿಳಿದುಬಂದಿದೆ. ಮಗು ಕೊಂದ ಆರೋಪದಡಿಯಲ್ಲಿ ತಾಯಿಯ ವಿರುದ್ಧ ಕೊಲೆ ಕೇಸ್ ದಾಖಲಾಗಿದೆ. ಈಕೆಯನ್ನ ಬ್ರಿಟಿಷ್ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರುಪಡಿಸಲಾಗಿದೆ.