ವೆಸ್ಟ್ ಇಂಡೀಸ್ ಖ್ಯಾತ ಕ್ರಿಕೆಟಿಗ ಕ್ರಿಸ್ ಗೇಲ್ ಜಮೈಕಾಗೆ ಕೊರೊನಾ ಲಸಿಕೆ ಕಳುಹಿಸಿಕೊಟ್ಟ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದ್ದಾರೆ. 50000 ಕೊರೊನಾ ಲಸಿಕೆಗಳನ್ನ ಕೆರಿಬಿಯನ್ ರಾಷ್ಟ್ರಕ್ಕೆ ಕಳುಹಿಸಿಕೊಟ್ಟಿದ್ದಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.
ಭಾರತ ಸರ್ಕಾರದ ಪ್ರಧಾನಿ ಮೋದಿ ಹಾಗೂ ಭಾರತದ ಜನತೆ, ಜಮೈಕಾಗೆ ಲಸಿಕೆ ಕಳುಹಿಸಿಕೊಟ್ಟ ಕಾರಣಕ್ಕೆ ನಿಮಗೆಲ್ಲ ಧನ್ಯವಾದ ಅರ್ಪಿಸಲು ಬಯಸುತ್ತೇನೆ. ಈ ಕ್ರಮವನ್ನ ನಾವು ಶ್ಲಾಘಿಸಿದ್ದೇವೆ ಎಂದು 17 ಸೆಕೆಂಡ್ಗಳ ವಿಡಿಯೋದಲ್ಲಿ ಗೇಲ್ ಹೇಳಿದ್ದಾರೆ. ಕ್ರಿಸ್ ಗೇಲ್ರ ಈ ವಿಡಿಯೋವನ್ನ ಜಮೈಕಾದಲ್ಲಿರುವ ಭಾರತೀಯ ಹೈ ಕಮಿಷನ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದೆ.
ಭಾರತ-ಇಂಗ್ಲೆಂಡ್ ಏಕದಿನ ಸರಣಿ: ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ಕ್ರುನಾಲ್ ಪಾಂಡ್ಯ
ಬುಧವಾರ ಗೇಲ್ ಸಹ ಆಟಗಾರ ಆಂಡ್ರೆ ರಸೆಲ್ ಕೂಡ ಕೊರೊನಾ ಲಸಿಕೆ ಕಳುಹಿಸಿಕೊಟ್ಟ ಭಾರತಕ್ಕೆ ವಿಡಿಯೋ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.
ಪ್ರಧಾನಿ ಮೋದಿ ಹಾಗೂ ಇಂಡಿಯನ್ ಹೈ ಕಮಿಷನ್ಗೆ ನಾನು ದೊಡ್ಡ ದೊಡ್ಡ ಧನ್ಯವಾದವನ್ನ ಅರ್ಪಿಸೋಕೆ ಇಚ್ಚಿಸುತ್ತೇನೆ. ಕೊರೊನಾ ಲಸಿಕೆಗಳು ಇಲ್ಲಿಗೆ ಬಂದಿದೆ ಹಾಗೂ ನಾವೆಲ್ಲ ಉತ್ಸುಕರಾಗಿದ್ದೇವೆ. ಈ ಜಗತ್ತು ಮತ್ತೆ ಸಹಜ ಸ್ಥಿತಿಯತ್ತ ಮರಳೋದನ್ನ ನಾನು ನೋಡಬೇಕಿದೆ. ಭಾರತ ಹಾಗೂ ಜಮೈಕಾ ಈಗ ಸಹೋದರರಾಗಿದ್ದಾರೆ ಎಂದು ರಸೆಲ್ ವಿಡಿಯೋದಲ್ಲಿ ಹೇಳಿದ್ದಾರೆ.