alex Certify ಕೊರೊನಾ 2ನೇ ಅಲೆಯಿಂದ ಅಪಾಯ ಹೆಚ್ಚಿರೋದು ಯಾರಿಗೆ ಗೊತ್ತಾ…..? ಇಲ್ಲಿದೆ ಒಂದಷ್ಟು ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ 2ನೇ ಅಲೆಯಿಂದ ಅಪಾಯ ಹೆಚ್ಚಿರೋದು ಯಾರಿಗೆ ಗೊತ್ತಾ…..? ಇಲ್ಲಿದೆ ಒಂದಷ್ಟು ಮಾಹಿತಿ

ಒಂದು ಬಾರಿ ಕೊರೊನಾ ವೈರಸ್​ನ್ನ ಗೆದ್ದ ಜನರಿಗೆ ಎರಡನೇ ಬಾರಿಗೆ ಕೊರೊನಾ ವೈರಸ್​ ಸೋಂಕು ಹರಡಬಲ್ಲದೇ..? ಒಂದು ವೇಳೆ ಎರಡನೇ ಬಾರಿಗೆ ಕೊರೊನಾ ಸೋಂಕು ತಗುಲಿದ್ರೆ ಇದರ ಅಪಾಯ ಯಾವ ಪ್ರಮಾಣದಲ್ಲಿ ಇರಲಿದೆ..? ಈಗಂತೂ ದೇಶದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಇದರಿಂದ ಯಾರಿಗೆ ಹೆಚ್ಚು ಅಪಾಯ ಕಾದಿದೆ. ಎಂಬಿತ್ಯಾದಿ ಪ್ರಶ್ನೆಗಳು ಅನೇಕರಲ್ಲಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಸಂಶೋಧನೆಯೊಂದು ಉತ್ತರ ನೀಡಿದ್ದು, ವೃದ್ಧರಿಗೆ ಕೊರೊನಾ 2ನೇ ಅಲೆಯಿಂದ ಅತಿ ಹೆಚ್ಚು ಅಪಾಯ ಕಾದಿದೆ ಎಂದು ಹೇಳಿದೆ.

ಕೊರೊನಾ ವೈರಸ್​ನಿಂದ ಒಂದು ಬಾರಿ ಗೆದ್ದ ವೃದ್ಧರು ನಮಗಿನ್ನು ಅಪಾಯ ಇಲ್ಲ ಎಂದು ಕಡೆಗಣಿಸುವಂತಿಲ್ಲ. ಡೆನ್ಮಾರ್ಕ್​ನಲ್ಲಿ ನಡೆಸಲಾದ ಸಂಶೋಧನೆಯೊಂದರ ಪ್ರಕಾರ ಒಂದು ಬಾರಿ ಕೊರೊನಾದಿಂದ ಗುಣಮುಖರಾದ 65 ವರ್ಷ ಒಳಗಿನ ರೋಗಿಗಳು  ಕಡಿಮೆ ಅಂದರೂ 6 ತಿಂಗಳುಗಳ ಕಾಲ ಕೊರೊನಾ ಸೋಂಕಿನಿಂದ 80 ಪ್ರತಿಶತ ಸುರಕ್ಷಿತರಾಗಿ ಇರ್ತಾರೆ. ಆದರೆ 65 ವರ್ಷ ಮೇಲ್ಪಟ್ಟವರಿಗೆ ಈ ಪ್ರಮಾಣ ಕೇವಲ 47 ಪ್ರತಿಶತ ಇದೆ ಎನ್ನಲಾಗಿದೆ.

ಮೆಡಿಕಲ್​ ಪತ್ರಿಕೆಯಾದ ಲಾಂಸೆಟ್​​ನಲ್ಲಿ ಪ್ರಕಟಿಸಲಾದ ಸಂಶೋಧನಾ ವರದಿಯಲ್ಲಿ, ವೃದ್ಧರು ಕೊರೊನಾ ಎರಡನೆ ಅಲೆಯಿಂದ ಬಚಾವಾಗಬೇಕು ಅಂದರೆ ಮಾರ್ಗಸೂಚಿಗಳನ್ನ ಪಾಲನೆ ಮಾಡದೇ ಬೇರೆ ದಾರಿಯಿಲ್ಲ ಎಂದು ಉಲ್ಲೇಖಿಸಲಾಗಿದೆ. 65 ವರ್ಷ ಮೇಲ್ಪಟ್ಟವರಲ್ಲಿ ಕೊರೊನಾ ಸಾವು ಕೂಡ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತೆ. ಇನ್ನು ಈ ವಿಚಾರವಾಗಿ ಮಾತನಾಡಿರುವ ಸಂಶೋಧಕ ಸ್ಟೀನ್​ ಎಥಿಲ್​ಬರ್ಗ್, ಕೊರೊನಾ ವೈರಸ್​ ದಾಳಿಗೆ ಎರಡನೆ ಬಾರಿಗೆ ತುತ್ತಾಗುವ ಸಾಧ್ಯತೆ ಯುವಕರು ಹಾಗೂ ವಯಸ್ಕರಲ್ಲಿ ಕಡಿಮೆ ಪ್ರಮಾಣದಲ್ಲಿ ಇರುತ್ತೆ. ಆದರೆ ವೃದ್ಧರಿಗೆ ಮಾತ್ರ ಕೊರೊನಾ ಅಪಾಯ ಅತಿ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...