alex Certify ಮದುವೆಗೆ ಮೊದಲು ಇದನ್ನು ಮಾಡದೆ ಹೋದ್ರೆ ‘ದುಃಸ್ವಪ್ನ’ವಾಗಲಿದೆ ಮೊದಲ ರಾತ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಗೆ ಮೊದಲು ಇದನ್ನು ಮಾಡದೆ ಹೋದ್ರೆ ‘ದುಃಸ್ವಪ್ನ’ವಾಗಲಿದೆ ಮೊದಲ ರಾತ್ರಿ

ಇತ್ತೀಚಿನ ದಿನಗಳಲ್ಲಿ ಮದುವೆಯಾಗುವುದು ಸವಾಲಿನ ಕೆಲಸವಾಗಿದೆ. ಮಧ್ಯಮ ವರ್ಗದ ಹುಡುಗರನ್ನು ಮದುವೆಯಾಗಲು ಹುಡುಗಿಯರು ಒಪ್ಪುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಹುಡುಗಿಯರು, ಮದುವೆ ಹೆಸರಿನಲ್ಲಿ ಮೋಸ ಮಾಡ್ತಿದ್ದಾರೆ. ಮೊದಲ ರಾತ್ರಿ ಜೀವನ ಪರ್ಯಂತ ದುಸ್ವಪ್ನವಾಗಿ ಕಾಡಬಾರದು ಎಂದ್ರೆ ಮದುವೆಗೂ ಮುನ್ನ ವಧುವಿನ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳಿ.

ಉತ್ತರ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ವಂಚನೆ ಪ್ರಕರಣಗಳು ಜಾಸ್ತಿಯಾಗಿವೆ. ಬಿಜ್ನೋರ್ ನಲ್ಲಿ ದಂಗಾಗಿಸುವ ಪ್ರಕರಣ ಬೆಳಕಿಗೆ ಬಂದಿದೆ. ಮಾರ್ಚ್ 15ರಂದು ಚಂದ್ರಶೇಖರ್ ಎಂಬ ವ್ಯಕ್ತಿ ಹರಿದ್ವಾರದ ಮನೀಷಾ ಎಂಬಾಕೆಯನ್ನು ಮದುವೆಯಾಗಿದ್ದಾನೆ. ಆದ್ರೆ ಮದುವೆಯ ಮೊದಲ ರಾತ್ರಿ ನಡೆದ ಘಟನೆ ಆತನನ್ನು ದಂಗಾಗಿಸಿದೆ.

ಪತ್ನಿ ಹಾಲು ಹಿಡಿದು ಕೋಣೆಗೆ ಬರ್ತಾಳೆಂದುಕೊಂಡವನಿಗೆ ಪತ್ನಿ ಕೈನಲ್ಲಿದ್ದ ಚಾಕು ನೋಡಿ ಶಾಕ್ ಆಗಿದೆ. ಪತಿಗೆ ಚಾಕು ತೋರಿಸಿ ಹೆದರಿಸಿದ ಮನೀಷಾ, ನಂತ್ರ ಚಾಕುವಿನಿಂದ ಇರಿದು ಪ್ರಜ್ಞೆ ತಪ್ಪಿಸಿದ್ದಾಳೆ. ನಂತ್ರ 15 ಸಾವಿರ ನಗದು ಹಾಗೂ ಮನೆಯಲ್ಲಿದ್ದ ಬಂಗಾರವನ್ನು ದೋಚಿ ಪರಾರಿಯಾಗಿದ್ದಾಳೆ. ಮನೀಷಾ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...