ಬೇಸಿಗೆ ಕಾಲದಲ್ಲಿ ಬೆವರಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಇದರಿಂದ ಚರ್ಮದಲ್ಲಿ ತುರಿಕೆ, ಅಲರ್ಜಿ, ಬಿರುಕುಗಳು ಮೂಡುತ್ತವೆ. ಬೇಸಿಗೆ ಕಾಲದಲ್ಲಿ ಎಲ್ಲರನ್ನು ಹೆಚ್ಚಾಗಿ ಕಾಡುವ ಸಮಸ್ಯೆಯೆಂದರೆ ದೇಹದಲ್ಲಿ ನೀರಿನಾಂಶ ಕಡಿಮೆಯಾಗಿ ಬಿರುಕು ಮೂಡುತ್ತದೆ. ಇದನ್ನು ನಿವಾರಿಸಲು ಪ್ರತಿದಿನ ಚರ್ಮವನ್ನು ಈ ರೀತಿ ಆರೈಕೆ ಮಾಡಿ.
*ಬೇಸಿಗೆ ಕಾಲದಲ್ಲಿ ಚರ್ಮದ ಮೇಲೆ ಹೆಚ್ಚು ಬೆವರು ಮತ್ತು ಕೊಳೆ ಇರುತ್ತದೆ. ಇದು ಚರ್ಮದ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಚರ್ಮವನ್ನು ಆಗಾಗ ಸ್ವಚ್ಛಗೊಳಿಸಿ.
ಹಾಲಿನಿಂದ ಮಾಡಿ ತಂಪು ತಂಪು ‘ಫ್ರೂಟ್ ಕಸ್ಟರ್ಡ್’
*ಸತ್ತ ಚರ್ಮ ಕೋಶಗಳು ನಿವಾರಣೆಯಾಗದಿದ್ದಾಗ ಚರ್ಮದಲ್ಲಿ ಬಿರುಕು ಮೂಡುತ್ತವೆ. ಹಾಗಾಗಿ ಆಗಾಗ ಸತ್ತ ಚರ್ಮ ಕೋಶಗಳನ್ನು ನಿವಾರಿಸಲು ಎಕ್ಸ್ ಪೋಲಿಯೇಟ್ ಮಾಡಿ.
*ಬೇಸಿಗೆ ಕಾಲದಲ್ಲಿ ಚರ್ಮವನ್ನು ತಂಪಾಗಿಸಲು ಮತ್ತು ಚರ್ಮದ ತೇವಾಂಶವನ್ನು ಕಾಪಾಡಲು ಬಾಡಿ ಲೋಷನ್ ಗಳನ್ನು ಹಚ್ಚಿ. ಬೇವು, ಲ್ಯಾವೆಂಡರ್ ನಂತಹ ಪದಾರ್ಥಗಳ ಬಾಡಿಲೋಷನ್ ಬಳಸಿ.