ಭಾರತವು 70 ದೇಶಗಳಿಗೆ ಒಟ್ಟು 5.84 ಕೋಟಿ ಕೋವಿಡ್-19 ಲಸಿಕೆಗಳನ್ನು ರಫ್ತು ಮಾಡಿದೆ. ಇದೇ ವೇಳೆ ದೇಶದೊಳಗಿನ ಮಂದಿಗೆ 3.48 ಕೋಟಿಯಷ್ಟು ಲಸಿಕೆಗಳನ್ನು ಹಾಕಿದೆ.
ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಸಹಾಯಕ ಸಚಿವರಾದ ಅಶ್ವಿನಿ ಕುಮಾರ್ ರಾಜ್ಯಸಭೆಯಲ್ಲಿ ಈ ಮಾಹಿತಿ ಇಟ್ಟಿದ್ದಾರೆ.
ಜನವರಿ 16ರಿಂದ ಕೋವಿಡ್-19 ಲಸಿಕಾ ಕಾರ್ಯಕ್ರಮ ಆರಂಭಗೊಂಡಿದ್ದು, ದೇಶದಲ್ಲಿರವ ಜನರಿಗಿಂತ ವಿದೇಶಗಳಿಗೆ ರಫ್ತು ಮಾಡುವುದಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೇ ದರದಲ್ಲಿ ಲಸಿಕಾ ಕಾರ್ಯಕ್ರಮ ಮುಂದುವರೆದಲ್ಲಿ, ಶತಕೋಟಿಯಷ್ಟು ಭಾರತೀಯರಿಗೆ ಲಸಿಕೆ ಹಾಕುವುದು ಬಹಳ ತಡವಾಗಲಿದೆ ಎಂಬ ಆತಂಕ ಸೃಷ್ಟಿಯಾಗಿದೆ.
ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಇನ್ಮುಂದೆ ವಾಹನಗಳ ಆರ್ಸಿ ರಿನ್ಯೂ ಮಾಡಲು ಕಟ್ಟಬೇಕು 8 ಪಟ್ಟು ಹೆಚ್ಚು ಹಣ..!
ಮಾರ್ಚ್ 15ರ ಒಂದೇ ದಿನದಂದು ಮೂರು ದಶಲಕ್ಷ ಮಂದಿಗೆ ಕೋವಿಡ್-19 ಲಸಿಕೆ ನೀಡಲಾಗಿದ್ದು, ಇದು ಈವರೆಗೂ ಒಂದೇ ದಿನದಲ್ಲಿ ದಾಖಲಾದ ಅತಿ ದೊಡ್ಡ ಸಂಖ್ಯೆಯಾಗಿದೆ.
ಮಹಾರಾಷ್ಟ್ರ, ಪಂಜಾಬ್, ಉತ್ತರಾಖಂಡ ಹಾಗೂ ಕೇರಳಗಳಲ್ಲಿ ಕೋವಿಡ್-19 ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿರುವ ಆತಂಕದ ನಡುವೆ ಸಾಧ್ಯವಾದಷ್ಟು ಬೇಗ ಲಸಿಕಾ ಕಾರ್ಯಕ್ರಮವನ್ನು ನಡೆಸಿಕೊಡಲು ಎಲ್ಲೆಡೆಯಿಂದ ಕೂಗು ಕೇಳಿ ಬರುತ್ತಿದೆ.