alex Certify 2000 ರೂಪಾಯಿ ‘ನಕಲಿ’ ನೋಟನ್ನು ಹೀಗೆ ಪತ್ತೆ ಹಚ್ಚಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2000 ರೂಪಾಯಿ ‘ನಕಲಿ’ ನೋಟನ್ನು ಹೀಗೆ ಪತ್ತೆ ಹಚ್ಚಿ….!

ನಕಲಿ ನೋಟುಗಳಿಗೆ ಬ್ರೇಕ್ ಹಾಕಲೆಂದೇ ಆರ್.ಬಿ.ಐ. 2000 ರೂಪಾಯಿ ನೋಟುಗಳಲ್ಲಿ ಕೆಲವೊಂದು ಸೆಕ್ಯೂರಿಟಿ ಫೀಚರ್ ಗಳನ್ನು ಅಳವಡಿಸಿದೆ. ಮಹಾತ್ಮಾ ಗಾಂಧಿ ಚಿತ್ರ ಹಾಗೂ ಮಂಗಳಯಾನದ ಫೋಟೋ ಈ ನೋಟಿನಲ್ಲಿರೋ ವಿಶೇಷ. ಇದನ್ನು ಹೊರತುಪಡಿಸಿ ನೋಟಿನಲ್ಲಿ ಒಟ್ಟು 17 ಸೆಕ್ಯೂರಿಟಿ ಫೀಚರ್ ಗಳಿವೆ.

1. ನೋಟನ್ನು ಬೆಳಕಿನಲ್ಲಿ ನೋಡಿದ್ರೆ ಮುಖಬೆಲೆ 2000 ಅನ್ನೋ ಅಂಕೆ ಕಾಣಿಸುತ್ತದೆ.

2. ನಿಮ್ಮ ಕಣ್ಣಿನಿಂದ 45 ಡಿಗ್ರಿ ಕೋನದಲ್ಲಿ ನೋಟನ್ನು ಹಿಡಿದು ನೋಡಿದ್ರೆ ಮುಖಬೆಲೆ ಸಂಖ್ಯೆಯ ಬಿಂಬ ಗೋಚರಿಸುತ್ತದೆ.

3. ನೋಟಿನ ಮುಖಬೆಲೆ 2000 ವನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ.

4. ಮಧ್ಯದಲ್ಲಿ ಮಹಾತ್ಮಾ ಗಾಂಧಿ ಅವರ ಚಿತ್ರ.

5. ಆರ್ ಬಿ ಐ ಮತ್ತು 2000 ಎಂದು ಮೈಕ್ರೋ ಅಕ್ಷರಗಳಲ್ಲಿ ಬರೆಯಲಾಗಿದೆ.

6. ನೋಟನ್ನು ಬಾಗಿಸಿದಾಗ ಭಾರತ, ಆರ್ ಬಿ ಐ, 2000 ಎಂದು ಬರೆದಿರುವ ಸೆಕ್ಯೂರಿಟಿ ಥ್ರೆಡ್ ನ ಬಣ್ಣ ಹಸಿರಿನಿಂದ ನೀಲಿಗೆ ತಿರುಗುತ್ತದೆ.

7. ಬಲಭಾಗದಲ್ಲಿ ಗ್ಯಾರಂಟಿ ಷರತ್ತು, ಆರ್ ಬಿ ಐ ಗವರ್ನರ್ ಸಹಿ, ಆರ್ ಬಿ ಐ ಲಾಂಛನ ಇದೆ.

8. ಮಹಾತ್ಮಾ ಗಾಂಧಿ ಚಿತ್ರ ಹಾಗೂ ಎಲೆಕ್ಟ್ರೋಟೈಪ್ (2000) ವಾಟರ್ ಮಾರ್ಕ್

9. ಎಡಗಡೆಯ ಮೇಲ್ಭಾಗದಲ್ಲಿ ಹಾಗೂ ಬಲಗಡೆಯ ಕೆಳಕ್ಕೆ ನ್ಯುಮರಲ್ಸ್ ಜೊತೆಗಿನ ನಂಬರ್ ಪ್ಯಾನಲ್ ಚಿಕ್ಕದಾಗುತ್ತ ಹೋಗುತ್ತದೆ.

10. ಬಲಭಾಗದ ಕೆಳಗಡೆ ರೂಪಾಯಿ ಚಿಹ್ನೆ ಜೊತೆಗೆ ಮುಖಬೆಲೆಯನ್ನು ಬಣ್ಣ ಬದಲಾಗುವ ಶಾಯಿಯಲ್ಲಿ ಬರೆಯಲಾಗಿದೆ.

11. ಬಲಭಾಗದಲ್ಲಿ ಅಶೋಕ ಸ್ಥಂಭದ ಲಾಂಛನ, ಬ್ಲೀಡ್ ಸಾಲುಗಳು ಹಾಗೂ ಐಡೆಂಟಿಫಿಕೇಶನ್ ಮಾರ್ಕ್ ಇದೆ.

12. ಬಲಭಾಗದಲ್ಲಿ ಎತ್ತರಿಸಿದ ಮುದ್ರಣದಲ್ಲಿ ಸಮತಲ ಆಯಾತದಲ್ಲಿ 2000 ರೂಪಾಯಿ ಎಂದು ಬರೆದಿದೆ.

13. ಎಡ ಮತ್ತು ಬಲಭಾಗದಲ್ಲಿ ತಲಾ 7 ಗೆರೆಗಳನ್ನು ಎಳೆಯಲಾಗಿದೆ.

14. ನೋಟನ್ನು ತಿರುಗಿಸಿ ಹಿಡಿದರೆ ಮುದ್ರಿಸಿದ ವರ್ಷ ಕಾಣುತ್ತದೆ.

15. ಸ್ಲೋಗನ್ ಜೊತೆಗೆ ಸ್ವಚ್ಛ ಭಾರತ ಲೋಗೋ.

16. ಮಧ್ಯದಲ್ಲಿ ಭಾಷಾ ಪ್ಯಾನಲ್.

17. ಮಧ್ಯದಲ್ಲಿ ಮಂಗಳಯಾನದ ಚಿತ್ರ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...