ಬೆಂಗಳೂರು: ವಿಧಾನಸಭೆಯ ಮೂರು ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.
ಸಿಂಧಗಿಯಿಂದ ಅಶೋಕ ಮನಗೋಳಿ, ಬಸವಕಲ್ಯಾಣದಿಂದ ಮಲ್ಲಮ್ಮ ಹಾಗೂ ಮಸ್ಕಿಯಿಂದ ಬಸವನಗೌಡ ಆರ್ ತುರವಿಹಾಳ ಅವರನ್ನು ಕಣಕ್ಕಿಳಿಸಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಮ್ಮತಿ ನೀಡಿದ್ದಾರೆ.
ಸೆಪ್ಟೆಂಬರ್ 23, 2020 ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನರಾಗಿದ್ದು, ಲೋಕಸಭೆಯಲ್ಲಿ ಅವರ ಸ್ಥಾನ ಖಾಲಿ ಇದೆ. ಇದಾದ ಬಳಿಕ ಬಸವಕಲ್ಯಾಣದ ಶಾಸಕ ಬಿ ನಾರಾಯಣ ರಾವ್ ನಿಧನರಾಗಿದ್ದರಿಂದ ಈ ಕ್ಷೇತ್ರ ತೆರವಾಗಿತ್ತು.
ಮಸ್ಕಿಯ ಕಾಂಗ್ರೆಸ್ ಶಾಸಕ ಪ್ರತಾಪ ಗೌಡ ಪಾಟೀಲ ಅವರು ಬಿಜೆಪಿಗೆ ಸೇರಿಕೊಂಡ ಕಾರಣ ಉಪಚುನಾವಣೆ ನಡೆಯಲಿದೆ. ಇನ್ನು ಸಿಂಧಗಿ ಜೆಡಿಎಸ್‌ನಿಂದ ಶಾಸಕರಾಗಿದ್ದ ಎಂ.ಸಿ. ಮನಗೂಳಿ ನಿಧನರಾದ ಕಾರಣ ಉಪ ಚುನಾವಣೆ ನಡೆಯಲಿದೆ.
ಸಿಂದಗಿ ಕ್ಷೇತ್ರಕ್ಕೆ ಇನ್ನೂ ಚುನಾವಣೆ ನಿಗದಿಯಾಗಿಲ್ಲ. ಉಳಿದ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಏಪ್ರಿಲ್ 17 ರಂದು ಉಪ ಚುನಾವಣೆ ನಡೆಯಲಿದೆ. ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ. ಸತೀಶ್ ಜಾರಕಿಹೊಳಿ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.