ಬಳಕೆದಾರರಿಗೆ ರಾಜಕೀಯ ಹಾಗೂ ಸಾಮಾಜಿಕ ವಿಚಾರಗಳ ಬಗ್ಗೆ ನೀಡಲಾಗುವ ಶಿಫಾರಸುಗಳನ್ನ ತೆಗೆದು ಹಾಕುವ ಪ್ರಕ್ರಿಯೆಯನ್ನ ಪ್ರಾರಂಭಿಸಿದ್ದೇವೆ ಎಂದು ಫೇಸ್ಬುಕ್ ಹೇಳಿದೆ. ಸಾಮಾಜಿಕ ವೇದಿಕೆಯಲ್ಲಿ ಘರ್ಷಣೆಯನ್ನ ತಪ್ಪಿಸುವ ಸಲುವಾಗಿ ಫೇಸ್ಬುಕ್ ಈ ನಿರ್ಧಾರ ಕೈಗೊಂಡಿದೆ.
ಇದು ಮಾತ್ರವಲ್ಲದೇ ಸಾಮಾಜಿಕ ಮಾಧ್ಯಮಗಳ ನಿಯಮವನ್ನ ಮುರಿಯುವ ಗುಂಪುಗಳತ್ತ ಜನರಿಗೆ ಆಕರ್ಷಣೆ ಆಗದೇ ಇರುವಂತೆ ಮಾಡಲು ವಿವಿಧ ಕ್ರಮಗಳನ್ನ ಕೈಗೊಂಡಿರೋದಾಗಿ ಸಂಸ್ಥೆ ಹೇಳಿದೆ. ಇಂತಹ ಗುಂಪುಗಳ ಶಿಫಾರಸ್ಸುಗಳನ್ನ ಕಡಿಮೆ ತೋರಿಸೋದು ಹಾಗೂ ಈ ಹಿಂದೆ ನಿಯಮಗಳನ್ನ ಉಲ್ಲಂಘಿಸಿದ ಗುಂಪುಗಳನ್ನ ಸೇರಲು ಹೊರಟವರನ್ನ ಎಚ್ಚರಿಸೋದು ಈ ರೀತಿ ಅನೇಕ ಕ್ರಮಗಳನ್ನ ಕೈಗೊಳ್ಳಲು ಮುಂದಾಗಿದೆ.
ಕ್ರೀಡೆ ಹಾಗೂ ಸಂಗೀತದಂತಹ ಸಾಮಾನ್ಯ ಹಿತಾಸಕ್ತಿ ಹೊಂದಿರುವ ಬಳಕೆದಾರರ ಗುಂಪನ್ನ ಒಂದು ಗ್ರೂಪ್ನಲ್ಲಿ ಸೇರುವಂತೆ ಮಾಡಿ ಅಲ್ಲಿ ಸಮಾಜಘಾತಕ ಮಾಹಿತಿಗಳನ್ನ ಹರಡುವ ಕೆಲಸ ಮಾಡಲಾಗ್ತಿದೆ ಎಂದು ನಾಗರಿಕ ಹಕ್ಕುಗಳ ಸಂಸ್ಥೆ ಈ ಹಿಂದೆಯೇ ಎಚ್ಚರಿಕೆ ನೀಡಿತ್ತು.