ಕೊರೊನಾ, ಲಾಕ್ಡೌನ್ ನಂತ್ರ ಆನ್ಲೈನ್ ಡೇಟಿಂಗ್ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಭಾರತದ ಡೇಟಿಂಗ್ ಅಪ್ಲಿಕೇಷನ್ ಕ್ವೇಕ್-ಕ್ವೇಕ್ ಆನ್ಲೈನ್ ಡೇಟಿಂಗ್ನ ಹಲವು ಹೊಸ ಪ್ರವೃತ್ತಿಗಳ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಬಹಿರಂಗಪಡಿಸಿದೆ.
ಕ್ವೇಕ್-ಕ್ವೇಟ್ ಆನ್ಲೈನ್ ಡೇಟಿಂಗ್ ಅಪ್ಲಿಕೇಷನ್ ಪ್ರಕಾರ, ಶೇಕಡಾ 55ರಷ್ಟು ಪುರುಷರು ಹಾಗೂ ಶೇಕಡಾ 75ರಷ್ಟು ಮಹಿಳೆಯರು ಸಂಗಾತಿಯಲ್ಲಿ ಭಾವನಾತ್ಮಕ ಸಂಬಂಧ ಹುಡುಕುತ್ತಾರಂತೆ. ಜನರು ಸಾಮಾನ್ಯ ಡೇಟಿಂಗ್ ನಿಂದ ಮುಂದೆ ಹೋಗಿದ್ದಾರೆ. ದೈಹಿಕ ಸಂಪರ್ಕಕ್ಕಿಂತ ಭಾವನಾತ್ಮಕ ಬಾಂಧವ್ಯಕ್ಕೆ ಹೆಚ್ಚಿನ ಆದ್ಯತೆ ನೀಡ್ತಿದ್ದಾರೆ. 21ರಿಂದ 30 ವರ್ಷ ವಯಸ್ಸಿನವರು ಪರಸ್ಪರ ಭೇಟಿಯಾಗಲು ಬಯಸುತ್ತಾರೆ. ಆದ್ರೆ 31 ವರ್ಷ ಮೇಲ್ಪಟ್ಟವರು ನಿಜವಾದ ಸಂಬಂಧಕ್ಕೆ ಬೆಲೆ ನೀಡಲು ಬಯಸುತ್ತಾರೆ.
20 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇಕಡಾ 45ರಷ್ಟು ಮಂದಿ ವರ್ಚುವಲ್ ಡೇಟಿಂಗ್ ಗೆ ಆಸಕ್ತಿ ತೋರುತ್ತಾರೆ. ವರ್ಚುವಲ್ ಡೇಟಿಂಗ್ ನಿಂದ ಸಂಗಾತಿ ಆಯ್ಕೆ ಸಾಧ್ಯವಿಲ್ಲವೆಂದು ಕೆಲವರು ಹೇಳಿದ್ದಾರೆ. ಕೊರೊನಾ ನಂತ್ರ ಆನ್ಲೈನ್ ಡೇಟಿಂಗ್ ಸಾಮಾನ್ಯವಾಗಿದೆ. ಇಬ್ಬರ ನಡುವೆ ದೀರ್ಘ ಮಾತುಕತೆ, ನೆಟ್ಫ್ಲಿಕ್ಸ್ ನಲ್ಲಿ ಒಟ್ಟಿಗೆ ಸಿನಿಮಾ ವೀಕ್ಷಣೆ ಮಾಡುವುದು ಡೇಟಿಂಗ್ ಫ್ಯಾಷನ್ ಆಗಿದೆ. ಕೆಟ್ಟ ಸಂಬಂಧದಿಂದ ಹೊರ ಬರಲು ಸುಲಭ ಮಾರ್ಗವೆಂದ್ರೆ ಹೊಸಬರನ್ನು ಭೇಟಿಯಾಗುವುದು ಎಂದು ಡೇಟಿಂಗ್ ಅಪ್ಲಿಕೇಷನ್ ಬಳಕೆದಾರರು ಒಪ್ಪಿಕೊಂಡಿದ್ದಾರೆ.