ಬೆಂಗಳೂರು: ಈರುಳ್ಳಿ ಬೆಲೆ ಕೆಜಿಗೆ 10 ರೂಪಾಯಿಗೆ ಇಳಿಕೆಯಾಗಿದೆ. ಎರಡು ತಿಂಗಳ ಹಿಂದೆಯಷ್ಟೇ ಒಂದು ಕೆಜಿ ಈರುಳ್ಳಿ 40 -50 ರೂಪಾಯಿವರೆಗೆ ಮಾರಾಟವಾಗಿತ್ತು. ಈಗ ಒಂದು ಕೆಜಿ ಈರುಳ್ಳಿಗೆ 10 ರಿಂದ 22 ರೂ. ಗೆ ಇಳಿದಿದೆ.
ಜನವರಿಯಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಿದ್ದರಿಂದ ರೈತರಿಗೆ ಅನುಕೂಲವಾಗಿತ್ತು. ಆದರೆ, ಮಾರ್ಚ್ 1 ರ ನಂತರದಲ್ಲಿ ಈರುಳ್ಳಿ ಬೆಲೆ ಕಡಿಮೆಯಾಗತೊಡಗಿದೆ. ಒಂದು ಕ್ವಿಂಟಲ್ ಈರುಳ್ಳಿ 2800 ರಿಂದ 3 ಸಾವಿರ ರೂಪಾಯಿವರೆಗೆ ಮಾರಾಟವಾಗಿತ್ತು. ಈಗ ಒಂದು ಕ್ವಿಂಟಲ್ ಗೆ 1000 ಇಂದ 2200 ರೂ. ದರ ಇದೆ.
ಹಿಂಗಾರು ಹಂಗಾಮಿನಲ್ಲಿ ಈರುಳ್ಳಿ ಬೆಳೆದ ರೈತರು ಉತ್ತಮ ಫಸಲು ಬಂದಿದ್ದರೂ ಬೆಲೆ ಇಳಿಕೆಯಾಗಿರುವುದರಿಂದ ಲಾಭ ಸಿಗದಂತಾಗಿದೆ. ಇನ್ನೂ 2 ತಿಂಗಳು ಈರುಳ್ಳಿ ಬೆಲೆ ಕಡಿಮೆಯಾಗಿರಲಿದೆ ಎಂದು ಹೇಳಲಾಗಿದೆ.