ಒಂದೇ ರೆಸ್ಟೋರೆಂಟ್ನಲ್ಲಿ ವರ್ಷಗಳಿಂದ ಕೆಲಸ ಮಾಡುತ್ತಿದ್ದ ಇಬ್ಬರು ಸಹೋದ್ಯೋಗಿಗಳಿಗೆ ತಾವು ಒಡಹುಟ್ಟಿದವರು ಎಂದು ಡಿಎನ್ಎ ಪರೀಕ್ಷೆ ಮೂಲಕ ತಿಳಿದು ಬಂದಿದೆ.
ಅಮೆರಿಕಾದ ಕನೆಕ್ಟಿಕಟ್ನ ನ್ಯೂ ಹೆವನ್ನಲ್ಲಿರುವ ರಷ್ಯನ್ ಲೇಡಿ ರೆಸ್ಟೋರೆಂಟ್ನಲ್ಲಿ ಕೆಲಸ ಮಾಡುವ ಕ್ಯಾಸಂಡ್ರಾ ಮ್ಯಾಡಿಸನ್ ಹಾಗೂ ಜೂಲಿಯಾ ತಿನೆಟ್ಟಿ 2013ರಿಂದಲೂ ಪರಸ್ಪರ ಪರಿಚಿತರಾಗಿದ್ದರು. ಈ ಪರಿಚಯ ಆಳವಾದ ಸ್ನೇಹಕ್ಕೆ ತಿರುಗಿತ್ತು.
ತಾವು ಹುಟ್ಟಿ, ದತ್ತು ಪಡೆಯಲ್ಪಟ್ಟ ಡೊಮಿನಿಕನ್ ಗಣರಾಜ್ಯ ದೇಶದ ಕನೆಕ್ಷನ್ ಮೂಲಕ ತಮ್ಮಿಬ್ಬರಲ್ಲೂ ಸಾಮ್ಯತೆಗಳು ಇವೆ ಎಂಬ ಕಾರಣಕ್ಕೆ ಇಬ್ಬರೂ ಇಷ್ಟು ನಿಕಟವಾಗಿದ್ದರು. ಇಬ್ಬರೂ ಒಂದೇ ಥರ ಕಾಣುವ ಕಾರಣ ಅವರು ಅಕ್ಕ-ತಂಗಿಯರೇ ಇರಬೇಕು ಎಂದು ಅವರು ಕೆಲಸ ಮಾಡುವ ರೆಸ್ಟೋರೆಂಟ್ಗೆ ಬರುತ್ತಿದ್ದ ಅನೇಕ ಗ್ರಾಹಕರು ಆಗಾಗ ಹೇಳುತ್ತಿದ್ದರು.
ವಿಮಾನ ಪ್ರಯಾಣದ ಮೊದಲು ತಿಳಿದಿರಲಿ ಈ ಕಟ್ಟುನಿಟ್ಟಿನ ಆದೇಶ
2015ರಲ್ಲಿ ಇಬ್ಬರೂ ಪ್ರತ್ಯೇಕವಾಗಿ ಬೇರೆ ಬೇರೆ ನಗರಗಳಲ್ಲಿ ವಾಸವಿದ್ದರು. 2018ರಲ್ಲಿ ಮ್ಯಾಡಿಸನ್ರ ತಾಯಿ ಆಕೆಗೆ ಡಿಎನ್ಎ ಪರೀಕ್ಷೆ ಮಾಡುವ ಸಾಧನವೊಂದನ್ನು ಕ್ರಿಸ್ಮಸ್ ಉಡುಗೊರೆಯಾಗಿ ಕೊಟ್ಟಿದ್ದರು. ಈ ಮೂಲಕ ಡೊಮಿನಿಕನ್ ಗಣರಾಜ್ಯದಲ್ಲಿರುವ ತನ್ನ ದೈಹಿಕ ತಂದೆಯನ್ನು ಪತ್ತೆ ಮಾಡಲು ಮ್ಯಾಡಿಸನ್ಗೆ ನೆರವಾಗಿದ್ದರು ಅವರ ಸಾಕು ತಾಯಿ. ಈ ದೇಶಕ್ಕೆ ಭೇಟಿ ಕೊಟ್ಟು ತನ್ನ ತಂದೆಯೊಂದಿಗೆ ಮಾತನಾಡುವ ವೇಳೆ ತನಗೆ, ತನ್ನ ಒಂಬತ್ತು ಮಕ್ಕಳ ಪೈಕಿ ಇಬ್ಬರನ್ನು ದತ್ತು ಪಡೆಯಲು ಕೊಟ್ಟಿದ್ದಾಗಿ ಆತನಿಂದ ತಿಳಿದುಕೊಂಡಿದ್ದಾರೆ ಮ್ಯಾಡಿಸನ್.
ಈ ಎಲ್ಲಾ ಮಾಹಿತಿಯ ಬಲದಿಂದ ತಿನ್ನೆಟ್ಟಿಗೆ ಡಿಎನ್ಎ ಪರೀಕ್ಷೆ ಮಾಡಿದ ಮ್ಯಾಡಿಸನ್, ತಾವಿಬ್ಬರೂ ದೈಹಿಕವಾಗಿಯೂ ಸಹ ಒಂದೇ ತಂದೆಯ ಮಕ್ಕಳು ಎಂದು ತಿಳಿದುಕೊಂಡಿದ್ದಾರೆ.