alex Certify ಡೆಲಿವರಿ ಬಾಯ್ ಕೊಟ್ಟ ದೂರಿಗೆ ಹೆದರಿ ಊರು ಬಿಟ್ಟ ಹಿತೇಶಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೆಲಿವರಿ ಬಾಯ್ ಕೊಟ್ಟ ದೂರಿಗೆ ಹೆದರಿ ಊರು ಬಿಟ್ಟ ಹಿತೇಶಾ

Bengaluru Woman Who Accused Zomato Delivery Man of Assault Flees Town after Address Leaked Online

ಜೊಮ್ಯಾಟೋ ಡೆಲಿವರಿ ಬಾಯ್‌ ಮೇಲೆ ಇನ್‌ಸ್ಟಾಗ್ರಾಂ ಸೆಲೆಬ್ರಿಟಿ ಒಬ್ಬರು ಮಾಡಲಾದ ಸುಳ್ಳು ಆರೋಪಗಳ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆಪಾದನೆ ಮಾಡಿದ್ದ ಹಿತೇಶಾ ಚಂದ್ರಾಣಿ ಎಂಬ ಮಹಿಳೆ ಊರು ಬಿಟ್ಟಿದ್ದಾರೆ ಎನ್ನಲಾಗಿದೆ.

ಡೆಲಿವರಿ ಬಾಯ್ ಕಾಮರಾಜು ಮೇಲೆ ಹುಸಿ ಆರೋಪ ಮಾಡಿರುವ ಆರೋಪಗಳು ಹಿತೇಶಾ ಮೇಲೆ ಬಲವಾಗಿ ಕೇಳಿ ಬಂದ ಬಳಿಕ ಆಕೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನರ ಆಕ್ರೋಶ ವಿಪರೀತವಾಗಿತ್ತು.

ತನ್ನ ಮೇಲೆ ಹಲ್ಲೆ ಮಾಡಿರುವುದಲ್ಲದೇ, ಸುಳ್ಳು ಆರೋಪ ಹೊರಿಸಿ ದೂರು ಕೊಟ್ಟಿದ್ದ ಹಿನ್ನಲೆಯಲ್ಲಿ ಜೊಮ್ಯಾಟೋ ಡೆಲಿವರಿ ಬಾಯ್ ಕಾಮರಾಜು ಈ ಸಂಬಂಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಶಾಕಿಂಗ್: ಐಸಿಯುವಿನಲ್ಲಿದ್ದ ರೋಗಿ ಮೇಲೆ ಆಸ್ಪತ್ರೆ ಸಿಬ್ಬಂದಿಯಿಂದಲೇ ಅತ್ಯಾಚಾರ..!

ಎಫ್‌ಐಆರ್‌ ದಾಖಲಾದ ಬಳಿಕ ಆಕೆಯ ವಿಳಾಸ ಆನ್ಲೈನ್‌ನಲ್ಲಿ ಲೀಕ್ ಆಗಿ ಸುರಕ್ಷತೆಯ ದೃಷ್ಟಿಯಿಂದ ಆಕೆ ಪಲಾಯನವಾಗಿದ್ದಾಳೆ ಎಂದು ವರದಿಯಾಗಿದೆ. ಆದರೆ ಕೆಲವರ ಪ್ರಕಾರ, ದೂರಿಗೆ ಹೆದರಿದ ಹಿತೇಶಾ ಓಡಿ ಹೋಗಿದ್ದಾರೆ.

ಕಳೆದ ಒಂದು ವಾರದಿಂದ ಈ ಘಟನೆ ಸಾಕಷ್ಟು ಸದ್ದು ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಾಮರಾಜ್ ಪರವಾಗಿ ಜನರು ದನಿಗೂಡಿಸಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲೆಂದು ತಂದಿರುವ ಕಾನೂನುಗಳ ದುರ್ಬಳಕೆ ಯಾವ ಮಟ್ಟದಲ್ಲಿ ಆಗುತ್ತಿದೆ ಎಂಬ ವಿಷಯವಾಗಿ ಸಾಕಷ್ಟು ಚರ್ಚೆಗಳಿಗೆ ಈ ಘಟನೆ ದಾರಿ ಮಾಡಿಕೊಟ್ಟಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...