ವಾಹನಗಳ ನಂಬರ್ ಪ್ಲೇಟ್ ಮೇಲೆ ಅನಧಿಕೃತವಾಗಿ ಹುದ್ದೆ ಹೆಸರು ಹಾಗೂ ಸರ್ಕಾರಿ ಸಂಸ್ಥೆಗಳ ಲಾಂಛನಗಳನ್ನು ಬಳಸುವ ಕುರಿತಂತೆ ಹೈಕೋರ್ಟ್ ಚಾಟಿ ಬೀಸಿದೆ. ಅಲ್ಲದೆ ನ್ಯಾಯಾಲಯ ಈ ಕುರಿತಂತೆ ನಿರ್ದೇಶನ ನೀಡಿದ್ದರೂ ಈಗಲೂ ಸಹ ಇಂತಹ ವಾಹನಗಳು ರಸ್ತೆ ಮೇಲೆ ಸಂಚರಿಸುತ್ತಿರುವ ಕುರಿತು ನ್ಯಾಯಪೀಠ ಬೇಸರ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕ ಸದಸ್ಯ ಪೀಠ, ಅನಧಿಕೃತ ನಂಬರ್ ಪ್ಲೇಟ್ ಗಳನ್ನು ವಾಹನಗಳ ಮೇಲೆ ಅಳವಡಿಸಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ಅನಧಿಕೃತ ನಂಬರ್ ಪ್ಲೇಟ್ ಹೊಂದಿರುವ ವಾಹನಗಳ ಮಾಲೀಕರಿಗೆ ದಂಡ ವಿಧಿಸುವ ಸಂಬಂಧ ಈ ಹಿಂದೆ ನೀಡಿದ್ದ ಆದೇಶ ಪಾಲನೆ ಕುರಿತು ವರದಿ ಸಲ್ಲಿಸಲು ಸರಕಾರಕ್ಕೆ ಸೂಚನೆ ನೀಡಿದೆ.
BIG NEWS: ಮತದಾರರಿಗೆ ಮುಖ್ಯ ಮಾಹಿತಿ – ವೋಟರ್ ಐಡಿಗೂ ಆಧಾರ್ ಜೋಡಣೆ; ಸರ್ಕಾರದಿಂದ ಚಿಂತನೆ
ಜೊತೆಗೆ ಅನಧಿಕೃತ ನಂಬರ್ ಪ್ಲೇಟ್ ಹೊಂದಿರುವ ವಾಹನಗಳು ವಿಧಾನಸೌಧ, ವಿಕಾಸಸೌಧ ಮತ್ತು ಬಹು ಮಹಡಿ ಕಟ್ಟಡದ ಆವರಣದೊಳಗೆ ಪ್ರವೇಶಿಸದಂತೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿರುವ ನ್ಯಾಯಪೀಠ ಮುಂದಿನ ವಿಚಾರಣೆಗೆ ದಿನಾಂಕವನ್ನು ನಿಗದಿಪಡಿಸಿದೆ.