ಮೊಬೈಲ್ ಫೋನ್ ವಂಚನೆಗಳಿಗೆ ಬ್ಯಾಂಕ್ ಗಳು ಜವಾಬ್ದಾರರಾಗಿರುವುದಿಲ್ಲ ಎಂದು ಗ್ರಾಹಕರ ವೇದಿಕೆ ತಿಳಿಸಿದೆ. ವಂಚಕರು ಮೊಬೈಲ್ ಗಳಿಗೆ ಕರೆ ಮಾಡಿ ಅಮಾಯಕ ಗ್ರಾಹಕರನ್ನು ವಂಚಿಸುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಗ್ರಾಹಕರು ತಮಗೆ ತಿಳಿಯದೇ ವಂಚಕರಿಗೆ ಮಾಹಿತಿ ನೀಡಿ ಹಣ ಕಳೆದುಕೊಂಡು ನಷ್ಟ ಅನುಭವಿಸಿದಲ್ಲಿ ಬ್ಯಾಂಕುಗಳು ಜವಾಬ್ದಾರರಾಗಿರುವುದಿಲ್ಲ ಎಂದು ಹೇಳಲಾಗಿದೆ.
ಫೋನ್ ವಂಚನೆಗಳ ಬಗ್ಗೆ ಬ್ಯಾಂಕ್ ಗಳು ಗ್ರಾಹಕರಿಗೆ ಪದೇಪದೇ ಎಚ್ಚರಿಕೆ ನೀಡುತ್ತವೆ. ದೂರವಾಣಿ, ಮೊಬೈಲ್ ಫೋನ್ ಗಳಲ್ಲಿ ಯಾರೊಂದಿಗೂ ತಮ್ಮ ಖಾತೆಯ ಮಾಹಿತಿಯನ್ನು ಹಂಚಿಕೊಳ್ಳದಂತೆ ಬ್ಯಾಂಕುಗಳಿಂದ ಎಚ್ಚರಿಕೆ ನೀಡಲಾಗಿದ್ದು, ಇದರ ಹೊರತಾಗಿಯೂ ಅನೇಕ ಗ್ರಾಹಕರು ತಮ್ಮ ಮಾಹಿತಿ ಹಂಚಿಕೊಂಡು ವಂಚನೆಗೆ ಒಳಗಾದರೆ ಬ್ಯಾಂಕುಗಳು ಜವಾಬ್ದಾರರಾಗಿರುವುದಿಲ್ಲ ಎಂದು ಗ್ರಾಹಕರ ವೇದಿಕೆ ತಿಳಿಸಿದೆ.
ಅಮ್ರೇಲಿ ಜಿಲ್ಲೆಯ ನಿವೃತ್ತ ಶಿಕ್ಷಕ ಕುರ್ಜಿ ಜಾವಿಯಾ ಅವರು ಈ ರೀತಿ ವಂಚನೆಗೆ ಒಳಗಾಗಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್ ಎಂದು ಹೇಳಿಕೊಂಡ ವ್ಯಕ್ತಿ ಅವರಿಗೆ ಕರೆ ಮಾಡಿದ್ದು, ಬ್ಯಾಂಕ್ ಖಾತೆ ವಿವರ ಪಡೆದುಕೊಂಡಿದ್ದಾನೆ. ನಂತರ ಅವರ ಖಾತೆಯಿಂದ ಎಗರಿಸರಿಸಲಾಗಿದೆ.
ಕುರ್ಜಿ ಜಾವಿಯಾ ಪರಿಹಾರ ಕೋರಿ ಗ್ರಾಹಕರ ವೇದಿಕೆ ಮೊರೆ ಹೋಗಿದ್ದು, ಬ್ಯಾಂಕ್ ಮ್ಯಾನೇಜರ್ ಹೆಸರಿನಲ್ಲಿ ತಮಗೆ ಕರೆ ಮಾಡಲಾಗಿದೆ. ಬ್ಯಾಂಕ್ ನವರು ವಂಚನೆ ತಡೆಯಬಹುದಿತ್ತು ಎಂದು ತಿಳಿಸಿದ್ದಾರೆ.
ಆದರೆ ಇದಕ್ಕೆ ಗ್ರಾಹಕರ ವೇದಿಕೆ ಒಪ್ಪದೇ, ಬ್ಯಾಂಕುಗಳಿಂದ ಗ್ರಾಹಕರಿಗೆ ಕಳುಹಿಸುವ ಎಚ್ಚರಿಕೆ ಸಂದೇಶವನ್ನು ಗ್ರಾಹಕರು ಅನುಸರಿಸಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಮಾವಳಿಗಳ ಪ್ರಕಾರ, ಗ್ರಾಹಕರ ನಿರ್ಲಕ್ಷದಿಂದ ನಷ್ಟವಾದಲ್ಲಿ ಅನಧಿಕೃತ ವಹಿವಾಟನ್ನು ಬ್ಯಾಂಕಿಗೆ ವರದಿ ಮಾಡುವವರೆಗೆ 3 ಕೆಲಸದ ದಿನಗಳಲ್ಲಿ ಸಂಪೂರ್ಣ ನಷ್ಟ ಭರಿಸಬೇಕಾಗುತ್ತದೆ. ಬ್ಯಾಂಕಿನ ಕಡೆಯಿಂದ ನಿಮಗೆ ಮೋಸವಾಗಿದ್ದಲ್ಲಿ ಗ್ರಾಹಕರು ಚಿಂತಿಸಬೇಕಿಲ್ಲ. ಆದರೆ, ಕರೆಯ ಮೋಸದ ವಹಿವಾಟಿಗೆ ಗ್ರಾಹಕರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದು ಹೇಳಲಾಗಿದೆ.