ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟಿ-20 ಪಂದ್ಯದಲ್ಲಿ ಭಾರತ ಸೋಲುಂಡಿದೆ. ಭಾರತದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಟಿ 20 ಯಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ್ರು.
ಕೊಹ್ಲಿ 46 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ ಬಾರಿಸಿ ಅಜೇಯ 77 ರನ್ ಗಳಿಸಿದರು. ಆದ್ರೆ ಕೊಹ್ಲಿಯ ಆಟ ಗೆಲುವು ತರಲಿಲ್ಲ. ಈ ಪಂದ್ಯದಲ್ಲಿ ಕೊಹ್ಲಿ ವಿಚಿತ್ರ ದಾಖಲೆಯೊಂದನ್ನು ಬರೆದಿದ್ದಾರೆ.
ಟಿ 20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ನಾಯಕ 75 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿ, ತಂಡದ ಇತರ ಆಟಗಾರರ ರನ್ 35 ರನ್ ಗಿಂತ ಕಡಿಮೆಯಿರುವ ದಾಖಲೆ ಇದಾಗಿದೆ.
ಇದು ಕೊಹ್ಲಿಯ ಟಿ 20 ವೃತ್ತಿಜೀವನದಲ್ಲಿ 5ನೇ ಬಾರಿ ಸಂಭವಿಸಿದೆ. ಶ್ರೀಲಂಕಾದ ಮಾಜಿ ಹಿರಿಯ ಬ್ಯಾಟ್ಸ್ ಮನ್ ಮಹೇಲಾ ಜಯವರ್ಧನೆ ಅವರನ್ನು ಕೊಹ್ಲಿ ಈ ವಿಷ್ಯದಲ್ಲಿ ಹಿಂದಿಕ್ಕಿದ್ದಾರೆ. ಜಯವರ್ಧನೆ ವೃತ್ತಿಜೀವನದಲ್ಲಿ ಇದು 4 ಬಾರಿ ಸಂಭವಿಸಿದೆ.
ಇದ್ರ ಜೊತೆ ಕೊಹ್ಲಿ ಇನ್ನೊಂದು ದಾಖಲೆ ಬರೆದಿದ್ದಾರೆ. ಕೊಹ್ಲಿ ತಮ್ಮ ಟಿ 20 ಅಂತರರಾಷ್ಟ್ರೀಯ ವೃತ್ತಿಜೀವನದ 27 ನೇ ಅರ್ಧಶತಕವನ್ನು ಬಾರಿಸುವ ಮೂಲಕ ಸಾಧನೆ ಮಾಡಿದ್ದಾರೆ.