alex Certify ಕೋರ್ಟ್ ಆವರಣದಲ್ಲಿ ಸೆಲ್ಫಿ ತೆಗೆದುಕೊಂಡವನಿಗೆ ಬಿಗ್ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋರ್ಟ್ ಆವರಣದಲ್ಲಿ ಸೆಲ್ಫಿ ತೆಗೆದುಕೊಂಡವನಿಗೆ ಬಿಗ್ ಶಾಕ್

ಶಿವಮೊಗ್ಗ ಜಿಲ್ಲೆ ಭದ್ರಾವತಿ ನ್ಯಾಯಾಲಯ ಆವರಣದಲ್ಲಿ ಸೆಲ್ಫಿ ತೆಗೆದುಕೊಂಡು ವ್ಯಕ್ತಿಗೆ ದಂಡ ವಿಧಿಸಲಾಗಿದೆ. ಕೋರ್ಟ್ ಆವರಣದಲ್ಲಿ ಸೆಲ್ಫಿ ತೆಗೆದು ಎಸ್.ಬಿ.ಐ. ಕ್ರೆಡಿಟ್ ಕಾರ್ಡ್ ಕೊಳ್ಳುವಂತೆ ಪ್ರಮೋಟ್ ಮಾಡುತ್ತಿದ್ದ ವ್ಯಕ್ತಿಗೆ ನಾಲ್ಕನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ 2000 ರೂಪಾಯಿ ದಂಡ ವಿಧಿಸಿದೆ.

ಭದ್ರಾವತಿ ನ್ಯಾಯಾಲಯದಲ್ಲಿ ಕಲಾಪ ನಡೆಯುವ ಸಂದರ್ಭದಲ್ಲಿ ಸಭಾಂಗಣದ ಎದುರು ನಿಂತಿದ್ದ ವ್ಯಕ್ತಿ ತನ್ನ ಸಹೋದ್ಯೋಗಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಇದನ್ನು ನ್ಯಾಯಾಧೀಶರು ಗಮನಿಸಿ ಅವರನ್ನು ಕರೆಸುವಷ್ಟರಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸೆಲ್ಫಿ ತೆಗೆದುಕೊಂಡಿದ್ದ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಕರೆಸಿಕೊಂಡ ನ್ಯಾಯಾಧೀಶರು 2000 ರೂ. ದಂಡ ವಿಧಿಸಿ ಕೋರ್ಟ್ ಆವರಣದಲ್ಲಿ ಈ ರೀತಿ ವರ್ತಿಸದಂತೆ ಎಚ್ಚರಿಕೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...