ಕೊರೊನಾ ವೈರಸ್ನಿಂದಾಗಿ ಅನಿವಾರ್ಯವಾಗಿ ಭಾರತದಲ್ಲೇ ಉಳಿದುಕೊಂಡಿರುವ ವಿದೇಶಿ ಪ್ರಜೆಗಳು ಹಾಗೂ ಅನಿವಾಸಿಗಳಿಗೆ 2020-21ನೇ ಸಾಲಿನಲ್ಲಿ ಎರಡೆರಡು ತೆರಿಗೆ ಸಲ್ಲಿಕೆ ಮಾಡೋದನ್ನ ತಪ್ಪಿಸುವ ಸಲುವಾಗಿ ಕೇಂದ್ರೀಯ ನೇರ ತೆರಿಗೆ ಮಂಡಳಿ ಮಾರ್ಚ್ 31ರೊಳಗಾಗಿ ಮಾಹಿತಿ ಸಲ್ಲಿಸುವಂತೆ ಹೇಳಿದೆ.
ಮಾರ್ಚ್ 3ರಂದು ಹೊರಡಿಸಲಾದ ಸುತ್ತೋಲೆಯ ಪ್ರಕಾರ ಡಿಟಿಎಎನಡಿಯಲ್ಲಿ ರಿಲೀಫ್ ಪಡೆದ ಬಳಿಕವೂ ಅವರು ಡಬಲ್ ತೆರಿಗೆ ಸಂಕಷ್ಟವನ್ನ ಎದುರಿಸುತ್ತಾ ಇದ್ದರೆ ಅಂತಹ ವ್ಯಕ್ತಿಗಳು ಫಾರ್ಮ್ ಎನ್ಆರ್ನ ಅಡಿಯಲ್ಲಿ ಮಾಹಿತಿ ಸಲ್ಲಿಸಬಹುದು.
ಪಾನ್ ಕಾರ್ಡ್ – ಆಧಾರ್ ಕಾರ್ಡ್ ಲಿಂಕ್ ಮಾಡಲು ಡೆಡ್ಲೈನ್
ಕೊರೊನಾ ವೈರಸ್ ಸಾಂಕ್ರಾಮಿಕದ ಸಂಕಷ್ಟದ ಹಿನ್ನೆಲೆ ಕೇಂದ್ರ ಸರ್ಕಾರ ಪಾನ್ – ಆಧಾರ್ ಲಿಂಕ್ಗೆ ಇರುವ ಗಡುವನ್ನ ಮಾರ್ಚ್ 31ರವರೆಗೆ ವಿಸ್ತರಿಸಿತ್ತು. ಈ ಹಿಂದೆ 2020ರ ಜೂನ್ 30ಕ್ಕೆ ಡೆಡ್ಲೈನ್ ನೀಡಲಾಗಿತ್ತು .
ಮಾರ್ಚ್ 31ರ ಒಳಗಾಗಿ ಪಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಆಗದೇ ಹೋದಲ್ಲಿ ಏಪ್ರಿಲ್ 1ರಿಂದ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ. ಇದಾದ ಬಳಿಕ ನೀವು ಪಾನ್ ಕಾರ್ಡ್ನ್ನು ಯಾವುದೇ ಆರ್ಥಿಕ ವ್ಯವಹಾರಕ್ಕೆ ಬಳಕೆ ಮಾಡಲು ಸಾಧ್ಯವಾಗೋದಿಲ್ಲ.
ಎಲ್ಟಿಸಿ ಕ್ಯಾಶ್ ವೋಚರ್ ಸ್ಕೀಮ್ನಡಿಯಲ್ಲಿ ಬಿಲ್ ಸಲ್ಲಿಸಿ
ಎಲ್ಟಿಸಿ ಕ್ಯಾಶ್ ವೌಚರ್ ಸ್ಕೀಮ್ನ ಅಡಿಯಲ್ಲಿ ತೆರಿಗೆ ಲಾಭ ಪಡೆಯಲು ನೀವು ಪ್ಲಾನ್ ಮಾಡಿದ್ದರೆ ಮಾರ್ಚ್ 31ರ ಒಳಗಾಗಿ ಜಿಎಸ್ಟಿ ಮೊತ್ತ ಹಾಗೂ ಜಿಎಸ್ಟಿ ಸಂಖ್ಯೆ ಹೊಂದಿರುವ ಬಿಲ್ಗಳನ್ನ ಸಲ್ಲಿಸಿ.ಈ ಸ್ಕೀಮ್ನ ಅಡಿಯಲ್ಲಿ ಉದ್ಯೋಗಿಯು ಎಲ್ಟಿಎ ಶುಲ್ಕವೆಂದು ಪರಿಗಣಿಸಲಾದ ಮೊತ್ತಕ್ಕಿಂತ ಮೂರು ಪಟ್ಟು 12% ಅಥವಾ ಅದಕ್ಕಿಂತ ಹೆಚ್ಚಿನ ಜಿಎಸ್ಟಿಯನ್ನು ಆಕರ್ಷಿಸುವ ಸರಕು ಮತ್ತು ಸೇವೆಗಳಿಗೆ ಖರ್ಚು ಮಾಡಬೇಕಾಗುತ್ತದೆ.
2020-21ನೇ ಸಾಲಿನ ಪರಿಷ್ಕೃತ ರಿಟರ್ನ್ಸ್ ಸಲ್ಲಿಕೆ ಮಾಡುವವರು ಮಾರ್ಚ್ 31ರೊಳಗೆ ಈ ಕೆಲಸವನ್ನ ಮುಗಿಸಬೇಕಿದೆ.
ವಿವಾದ್ ಸೇ ವಿಶ್ವಾಸ್ ಯೋಜನೆ : ಕೇಂದ್ರ ಸರ್ಕಾರದ ವಿವಾದ್ ಸೇ ವಿಶ್ವಾಸ್ ಯೋಜನೆಗೆ ಈ ಹಿಂದೆ ಫೆಬ್ರವರಿ 26ಕ್ಕೆ ಗಡುವನ್ನ ನೀಡಲಾಗಿತ್ತು. ಆದರೆ ಕೇಂದ್ರಿಯ ನೇರ ತೆರಿಗೆ ಮಂಡಳಿ ವಿವಾದ್ ಸೇ ವಿಶ್ವಾಸ್ ಯೋಜನೆಯ ಅಡಿಯಲ್ಲಿ ಫೈಲ್ ಮಾಡಲು ಮಾರ್ಚ್ 31 ಕೊನೆಯ ಗಡುವನ್ನ ನೀಡಿದೆ. ಈ ಯೋಜನೆಯ ಅಡಿಯಲ್ಲಿ ಹೆಚ್ಚುವರಿ ಬಡ್ಡಿ ಇಲ್ಲದೇ ತೆರಿಗೆ ಪಾವತಿ ಮಾಡಲು ಏಪ್ರಿಲ್ 30, 2021 ಕೊನೆಯ ದಿನಾಂಕವಾಗಿದೆ.
ಸರ್ಕಾರಿ ನೌಕರರು ಮಾರ್ಚ್ 31ರೊಳಗಾಗಿ 10 ಸಾವಿರ ರೂಪಾಯಿ ಬಡ್ಡಿ ರಹಿತ ವಿಶೇಷ ಮುಂಗಡವನ್ನ ಪಡೆಯಬಹುದಾಗಿದೆ. ಎಲ್ಟಿಸಿ ನಗದು ಚೀಟಿ ಯೋಜನೆಯೊಂದಿಗೆ ಸರ್ಕಾರ ಅಕ್ಟೋಬರ್ 2020ರಲ್ಲಿ ಈ ವಿಶೇಷ ಮುಂಗಡವನ್ನ ಘೋಷಿಸಿದೆ. ಸರ್ಕಾರಿ ನೌಕರನಿಗೆ ನೀಡಲಾಗುವ ಈ ವಿಶೇಷ ಮುಂಗಡವನ್ನ ಸರ್ಕಾರ 10 ಕಂತುಗಳಲ್ಲಿ ವಾಪಸ್ ಪಡೆಯಲಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಸಬ್ಸಿಡಿ ಸಾಲ ಪಡೆಯಲು ಮಾರ್ಚ್ 31, 2021 ಕೊನೆಯ ದಿನಾಂಕವಾಗಿದೆ. ಕಡಿಮೆ ಬಡ್ಡಿದರಕ್ಕೆ ಸಾಲ ಸೌಲಭ್ಯ ನೀಡುವ ಮೂಲಕ ಸಾಲಗಾರನಿಗೆ ಕೊಂಚ ರಿಲೀಫ್ ಸಿಗುತ್ತದೆ.
ಆತ್ಮನಿರ್ಭರ್ ಭಾರತ್ ಯೋಜನೆಯ ಅಡಿಯಲ್ಲಿ ಸರ್ಕಾರ ಕಳೆದ ಮೇ 13ರಂದು ತುರ್ತು ಸಾಲದ ಸೌಲಭ್ಯವನ್ನ ಘೋಷಣೆ ಮಾಡಿತು. ವ್ಯಾಪಾರ ಉದ್ದೇಶಕ್ಕೆ ಸಾಲ ಮಾಡಲು ಬಯಸುವವರಿಗೆ ಸಾಲ ಪಡೆಯುವವರು ಮಾರ್ಚ್ 31ರೊಳಗೆ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.
ಮುಂಗಡ ತೆರಿಗೆ ಪಾವತಿ ಮಾಡುವವರಿಗೂ ಮಾರ್ಚ್ 15 , 2021 ಕೊನೆಯ ದಿನಾಂಕವಾಗಿದೆ. ಈ ದಿನಾಂಕದ ಒಳಗಾಗಿ ಮುಂಗಡ ತೆರಿಗೆ ಪಾವತಿ ಮಾಡಲು ಆಗದವರು ಶೇ. 1ರಷ್ಟು ಬಡ್ಡಿಯನ್ನ ಪಾವತಿ ಮಾಡಬೇಕು.