alex Certify ಟ್ಯಾಟೂ ಪ್ರಿಯರು ದಕ್ಷಿಣ ಭಾರತದ ಈ ನಟಿಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ಯಾಟೂ ಪ್ರಿಯರು ದಕ್ಷಿಣ ಭಾರತದ ಈ ನಟಿಯರು

ಬೆಳ್ಳಿ ತೆರೆ ಮೇಲೆ ಮಿಂಚುವ ನಟಿಯರು ಹಚ್ಚೆ ಹಾಕಿಸಿಕೊಳ್ಳುವುದ್ರಲ್ಲಿ ಹಿಂದೆ ಬಿದ್ದಿಲ್ಲ. ಬಾಲಿವುಡ್ ಮಾತ್ರವಲ್ಲ ದಕ್ಷಿಣ ಭಾರತದ ನಟಿಯರು ಕೂಡ ಹಚ್ಚೆ ಹಾಕಿಸಿಕೊಳ್ಳುವುದ್ರಲ್ಲಿ ಮುಂದಿದ್ದಾರೆ. ಹಚ್ಚೆ ಪ್ರಿಯ ನಟಿಯರ ಪಟ್ಟಿಯಲ್ಲಿ ಸಮಂತಾ, ಶೃತಿ ಹಾಸನ್ ಕೂಡ ಸೇರಿದ್ದಾರೆ.

ನಟಿ ಸಮಂತಾ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಸಮಂತಾ ಮೂರು ಕಡೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಅವಕಾಶ ಸಿಕ್ಕಾಗ ಅದನ್ನು ಅಭಿಮಾನಿಗಳ ಮುಂದೆ ಪ್ರದರ್ಶಿಸಿದ್ದಾರೆ. ಕತ್ತಿನ ಕೆಳಗೆ ವೈಎಂಸಿ ಎಂದು ಬರೆಸಿಕೊಂಡಿದ್ದಾರೆ. ಸೊಂಟದ ಬಳಿ ಪತಿ ಸಹಿಯಿದೆ. ಅಲ್ಲದೆ ಎಡಗೈ ಮಣಿಕಟ್ಟಿನ ಮೇಲೆ ಮತ್ತೊಂದು ಹಚ್ಚೆಯಿದೆ.

ಇನ್ನು ಈ ಪಟ್ಟಿಯಲ್ಲಿ ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ಕೂಡ ಇದ್ದಾರೆ. ಶೃತಿ ಅನೇಕ ಬಾರಿ ಹಚ್ಚೆಯ ಫೋಟೋ ಹಂಚಿಕೊಂಡಿದ್ದಾರೆ. ಅವ್ರ ಬೆನ್ನಿನ ಮೇಲೆ ತಮಿಳು ಲಿಪಿ ನೋಡಬಹುದು. ಹಾಗೆ ಕಿವಿ ಹಿಂದೆ ಸಂಗೀತದ ಚಿಹ್ನೆಯಿದೆ.

ನಟಿ ರಶ್ಮಿಕಾ ಮಂದಣ್ಣ ಮಣಿಕಟ್ಟಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಇನ್ನು ತ್ರಿಶಾ ಕೃಷ್ಣಾ ಕೂಡ ಈ ಪಟ್ಟಿಯಲ್ಲಿದ್ದಾರೆ. ತ್ರಿಶಾ ಎದೆ ಮೇಲೆ ಕಾರ್ಟೂನ್ ಹಚ್ಚೆ ಹಾಕಿಸಿಕೊಂಡಿದ್ದಾರೆ. ಭುಜ ಹಾಗೂ ಕೈ ಮೇಲೆಯೂ ಹಚ್ಚೆಯಿದೆ. ಇಷ್ಟೇ ಅಲ್ಲ, ನಯನತಾರಾ,ಪ್ರಿ ಯಾಮಣಿ, ತಾಪ್ಸಿ ಕೂಡ ಹಚ್ಚೆ ಪ್ರಿಯರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...