ದಕ್ಷಿಣ ಕೊರಿಯಾದ ಬಾನ್ವೋಲ್ ಹಾಗೂ ಬಾಕಿ ದ್ವೀಪಗಳ ನಿವಾಸಿಗಳು ತಮ್ಮ ಮನೆಗಳು, ರಸ್ತೆಗಳು ಹಾಗೂ ಸೇತುವೆಗಳನ್ನೆಲ್ಲಾ ಸಂಪೂರ್ಣ ನೇರಳೆ ಬಣ್ಣದಲ್ಲಿ ಪೇಂಟ್ ಮಾಡಿದ್ದು, ಲ್ಯಾವೆಂಡರ್ ಮತ್ತು ಆಸ್ಟೆರ್‌ಗಳಂಥ ನೇರಳೆ ಬಣ್ಣದ ಹೂವುಗಳನ್ನು ನೆಡುವ ಮೂಲಕ ತಮ್ಮ ಊರನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಪಣ ತೊಟ್ಟಿದ್ದಾರೆ.
“ಯುವಕರೆಲ್ಲಾ ಊರು ಬಿಟ್ಟ ಕಾರಣ ನಮ್ಮಂಥ ವೃದ್ಧ ಜನರು ಇಲ್ಲಿ ಸ್ತಬ್ಧವಾದ ಬದುಕನ್ನು ನಡೆಸಬೇಕಾಗಿದೆ. ಯುವಕರು ಹಾಗೂ ಮಕ್ಕಳು ಪಟ್ಟಣಕ್ಕೆ ಭೇಟಿ ಕೊಡುತ್ತಿರುವದನ್ನು ನೋಡಲು ಖುಷಿಯಾಗುತ್ತಿದೆ. ಅವರೆಲ್ಲಾ ನನ್ನ ಮೊಮ್ಮಕ್ಕಳಿದ್ದಂತೆ,” ಎನ್ನುತ್ತಾರೆ 79 ವರ್ಷದ ಶಿನ್ ಡಿಯೋಕ್-ಇಮ್. ನೂರರ ಆಸುಪಾಸಿನ ಜನಸಂಖ್ಯೆ ಇರುವ ಈ ಪುಟ್ಟ ದ್ವೀಪದಲ್ಲಿ ಸರ್ಕಾರದ ನೆರವಿನಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಈ 7 ಅಕ್ಷರ ಟೈಪ್ ಮಾಡಿದ್ರೆ ನಿಮ್ಮ ಟ್ವಿಟರ್ ಖಾತೆಯಾಗುತ್ತೆ ಲಾಕ್
2015ರಿಂದ ಈಚೆಗೆ ಶಿನಾನ್ ಕೌಂಟಿ ಸರ್ಕಾರವು 4.8 ಶತಕೋಟಿ ವೋನ್ ($4.25 ದಶಲಕ್ಷ) ಹೂಡಿಕೆ ಮಾಡಿ ದ್ವೀಪಗಳಿಗೆ ನೇರಳೆ ಬಣ್ಣದ ಮೆರುಗು ನೀಡಲು ಮುಂದಾಗಿದೆ.
ಇಲ್ಲಿನ ರೆಸ್ಟೋರಂಟ್‌ಗಳೂ ಸಹ ನೇರಳೆ ಬಣ್ಣದ ಅನ್ನದೊಂದಿಗೆ ಆಹಾರವನ್ನು ನೇರಳೆ ಬಣ್ಣದ ಪ್ಲೇಟ್‌ಗಳಲ್ಲಿ ಕೊಡಲಿದೆ. ಈ ಪ್ರಾಜೆಕ್ಟ್ ಪರ್ಪಲ್ ಅಭಿಯಾನದಲ್ಲಿ ದ್ವೀಪದ ನಿವಾಸಿಗಳು ಭಾರೀ ಉತ್ಸಾಹದಿಂದ ಭಾಗಿಯಾಗಿದ್ದಾರೆ.