ಹೆಚ್ಚಿನ ಮಹಿಳೆಯರು ಗರ್ಭಾವಸ್ಥೆಯಲ್ಲಿ ಮೊಡವೆ ಸಮಸ್ಯೆಯನ್ನು ಎದುರಿಸುತ್ತಾರೆ. ಹಾರ್ಮೋನ್ ಅಸಮತೋಲನದಿಂದ ಹಾಗೂ ಮೇದೋಗ್ರಂಥಿಗಳ ಸ್ರಾವದಿಂದ ರಂಧ್ರಗಳು ಮುಚ್ಚಿ ಮುಖದಲ್ಲಿ ಬಿರುಕು, ಮೊಡವೆಗಳು ಮೂಡುತ್ತವೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.
*ಆಪಲ್ ಸೈಡರ್ ವಿನೆಗರ್ ನ್ನು ತೆಗೆದುಕೊಂಡು ನೀರಿನಲ್ಲಿ ಮಿಕ್ಸ್ ಮಾಡಿ ಹತ್ತಿಯ ಉಂಡೆಯಿಂದ ಚರ್ಮದ ಮೇಲೆ ಹಚ್ಚಿ. ಇದರಿಂದ ಮೊಡವೆ ಸಮಸ್ಯೆ ನಿವಾರಣೆಯಾಗುತ್ತದೆ.
ನಿಮಗಿಂತ ಬೇಗ ನಿಮ್ಮ ತ್ವಚೆಗೆ ಮುಪ್ಪು ಬಂದೀತು ಜೋಕೆ…..!
*ಅಡುಗೆ ಸೋಡಾ ಚರ್ಮದ ಮೇಲಿನ ಎಣ್ಣೆಯಂಶವನ್ನು ಒಣಗಿಸಿ ಮೊಡವೆ ಸಮಸ್ಯೆಯನ್ನು ದೂರ ಮಾಡುತ್ತದೆ. ಹಾಗಾಗಿ 1 ಚಮಚ ಅಡುಗೆ ಸೋಡಾ, 1 ಚಮಚ ನೀರನ್ನು ಸೇರಿಸಿ ಗುಳ್ಳೆಗಳ ಮೇಲೆ ಹಚ್ಚಿ ಒಣಗಿದ ಬಳಿಕ ವಾಶ್ ಮಾಡಿ.
*ನಿಂಬೆ ಹಣ್ಣಿನಂತಹ ಸಿಟ್ರಸ್ ಹಣ್ಣನ್ನು ಬಳಸಿ. ಇದು ಸತ್ತ ಚರ್ಮ ಕೋಶಗಳನ್ನು ತೆಗೆದುಹಾಕಿ ರಂಧ್ರಗಳನ್ನು ಓಪನ್ ಮಾಡುತ್ತದೆ. ಹಾಗಾಗಿ ಸಿಟ್ರಸ್ ಹಣ್ಣಿನ ರಸವನ್ನು ತೆಗೆದು ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ತಣ್ಣೀರಿನಿಂದ ಸ್ವಚ್ಛಗೊಳಿಸಿ.