ಪ್ರಯಾಣಿಕರು ತಮ್ಮ ವಾಹನದಲ್ಲಿ ಮರೆತು ಬಿಟ್ಟು ಹೋದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಪ್ರಾಮಾಣಿಕವಾಗಿ ವಾರಸುದಾರರಿಗೆ ಮರಳಿಸುವ ಮೂಲಕ ರಿಕ್ಷಾ ಚಾಲಕರು ತಮ್ಮ ಪ್ರಾಮಾಣಿಕತೆಯಿಂದ ನೆಟ್ಟಿಗರ ಮನಗೆದ್ದ ಅನೇಕ ನಿದರ್ಶನಗಳ ಬಗ್ಗೆ ಓದಿದ್ದೇವೆ.
ಇಂಥ ಮತ್ತೊಂದು ನಿದರ್ಶನದಲ್ಲಿ, ಒಡಿಶಾದ ಭುವನೇಶ್ವರ ಜಗನ್ನಾಥ ಪಾತ್ರಾ, ತಮ್ಮ ಪ್ರಾಮಾಣಿಕತೆಯಿಂದ ಸುದ್ದಿಯಲ್ಲಿದ್ದಾರೆ.
ಓಲಾ ಕ್ಯಾಬ್ಸ್‌ನಲ್ಲಿ ಆಟೋ ಚಾಲಕನಾದ ಜಗನ್ನಾಥ ತಮ್ಮ ಗ್ರಾಹಕರಲ್ಲಿ ಒಬ್ಬರು ಮರೆತು ಹೋದ ಮೊಬೈಲ್ ಹಾಗೂ ಪರ್ಸ್‌ಅನ್ನು ಮರಳಿಸುವ ಮೂಲಕ ನೆಟ್ಟಿಗರ ಹೃದಯ ಗೆದ್ದಿದ್ದಾರೆ.
ಶಾಸಕರ ಕಾರಿನ ಗಾಜು ಒಡೆದು ಲಕ್ಷಾಂತರ ರೂಪಾಯಿ ದೋಚಿ ಪರಾರಿಯಾದ ಖದೀಮರು
ಪಾತ್ರಾರ ಕಥೆಯನ್ನು ಸುಶಾಂತಾ ಸಾಹೋ ಎಂಬ ವ್ಯಕ್ತಿ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆಟೋದಲ್ಲಿ ಪರ್ಸ್ ಹಾಗೂ ಮೊಬೈಲ್ ಕಳೆದುಕೊಂಡಿದ್ದ ವ್ಯಕ್ತಿ ಇವರೇ ಆಗಿದ್ದಾರೆ.
“ಹೇ ಓಲಾ ಕ್ಯಾನ್ಸ್, ಜಗನ್ನಾಥ ಪಾತ್ರಾನ ಬಗ್ಗೆ ಹೇಳಬೇಕೆನಿಸುತ್ತಿದೆ. ಈತ ನನ್ನ ಆಟೋ ಡ್ರೈವರ್ ಆಗಿದ್ದ, ಒಬ್ಬ ಅದ್ಭುತ ವ್ಯಕ್ತಿ. ಆಟೋ ಸವಾರಿಯಾದ ಕೂಡಲೇ ನನ್ನ ಫೋನ್ ಹಾಗೂ ಪರ್ಸ್‌ಅನ್ನು ಆತುರದಲ್ಲಿ ಬಿಟ್ಟು ಬಂದ ಬಳಿಕ ಅವುಗಳನ್ನು ಹಿಂದಿರುಗಿಸಿದ್ದಾನೆ. ಇದಕ್ಕೆ ಬದಲಿಯಾಗಿ ನಾನು ಆತನಿಗೆ ನಗದಿನ ಉಡುಗೊರೆ ಕೊಡಲು ಮುಂದಾದಾಗ ಅದನ್ನು ನಯವಾಗಿ ತಿರಸ್ಕರಿಸಿದ್ದಾರೆ ಪಾತ್ರಾ,” ಎಂದು ಹೇಳಿಕೊಂಡಿದ್ದಾರೆ ಸುಶಾಂತಾ.