alex Certify ಹಿಂದಿ ಹಾಡಿಗೆ ಭರ್ಜರಿ ಹೆಜ್ಜೆ ಹಾಕಿದ ಬರ್ತಡೇ ಗರ್ಲ್​ ಆಲಿಯಾ…..! ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂದಿ ಹಾಡಿಗೆ ಭರ್ಜರಿ ಹೆಜ್ಜೆ ಹಾಕಿದ ಬರ್ತಡೇ ಗರ್ಲ್​ ಆಲಿಯಾ…..! ವೈರಲ್​ ಆಯ್ತು ವಿಡಿಯೋ

ಬಾಲಿವುಡ್​ ನಟಿ ಆಲಿಯಾ ಭಟ್​ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಟಿ ಆಲಿಯಾ ಭಟ್​ ತಮ್ಮ ಸ್ನೇಹಿತ ರಿಯಾ ಖುರಾನಾ ಜನ್ಮದಿನಾಚರಣೆಗೆಂದು ಜೈಪುರಕ್ಕೆ ಪ್ರಯಾಣ ಬೆಳೆಸಿದ್ದರು. ತಮ್ಮ ಗರ್ಲ್​ ಗ್ಯಾಂಗ್​​ನೊಂದಿಗೆ ಆಲಿಯಾ ಎಂಜಾಯ್​ ಮಾಡಿದ್ದು, ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದೀಗ ಬಾದ್​ ಶಾರ ಗೇಂಡಾ ಫೂಲ್​ ಹಾಗೂ ಜಲೇಬಿ ಬಾಯ್​ ಹಾಡಿಗೆ ನಟಿ ನೃತ್ಯ ಮಾಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಆಲಿಯಾ ಭಟ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಮದುವೆ ಸಂಭ್ರಮದ ಫೋಟೋಗಳನ್ನ ಶೇರ್​ ಮಾಡಿದ್ದರು. ಫೋಟೋಗಳ ಮೂಲಕ ನಾವು ಪ್ರೀತಿಯನ್ನ ಇಟ್ಟುಕೊಳ್ಳುತ್ತೇವೆ. ಈ ಮೂಲಕ ನೆನಪುಗಳನ್ನ ಕಲೆ ಹಾಕುತ್ತೇವೆ ಎಂದು ಶೀರ್ಷಿಕೆ ನೀಡಿದ್ದಾರೆ.

ಇನ್ನೊಂದು ಫೋಟೋದಲ್ಲಿ ನೀಲಿ ಬಣ್ಣದ ಧಿರಿಸನ್ನ ಧರಿಸಿದ್ದ ಗೆಳತಿಯ ಜೊತೆ ಅಲಿಯಾ ಕಾಣಿಸಿಕೊಂಡಿದ್ದಾರೆ. ಈ ಎಲ್ಲಾ ಫೋಟೋಗೆ ಆಲಿಯಾ ತಾಯಿ ಸೋನಿ ರಜ್ದನ್​, ಅದ್ಭುತ..! ರಿಯಾಗೆ ಶುಭಾಶಯಗಳು. ವೈವಾಹಿಕ ಜೀವನ ಸುಖವಾಗಿರಲಿ ಎಂದು ಕಮೆಂಟ್​ ಮಾಡಿದ್ದಾರೆ.

https://www.instagram.com/p/CMYy1oTjeXJ/?utm_source=ig_embed

https://www.instagram.com/p/CMZKROHMq0p/?utm_source=ig_web_copy_link

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...