ಏಪ್ರಿಲ್ 1,2020ರಂದು ದೇನಾ ಬ್ಯಾಂಕ್, ವಿಜಯ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್, ಆಂಧ್ರ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಯುನೈಟೆಡ್ ಬ್ಯಾಂಕ್ ಮತ್ತು ಅಲಹಾಬಾದ್ ಬ್ಯಾಂಕ್ ವಿಲೀನಗೊಂಡಿವೆ. ಈ ಬ್ಯಾಂಕುಗಳ ಚೆಕ್‌ಬುಕ್‌ಗಳು ಮತ್ತು ಪಾಸ್‌ಬುಕ್‌ಗಳನ್ನು ಈಗಲೂ ಬಳಸಲಾಗ್ತಿದೆ. ಆದರೆ ಏಪ್ರಿಲ್ 1, 2021 ರಿಂದ ಈ ಬ್ಯಾಂಕ್ ಗಳ ಚೆಕ್ ಬುಕ್, ಪಾಸ್ಬುಕ್ ಬಳಸಲು ಸಾಧ್ಯವಿಲ್ಲ.
ಏಪ್ರಿಲ್ 1 ರಿಂದ ಹಳೆಯ ಚೆಕ್‌ಬುಕ್ ಮತ್ತು ಪಾಸ್‌ಬುಕ್ ಅಮಾನ್ಯವಾಗುತ್ತದೆ. ಬ್ಯಾಂಕುಗಳನ್ನು ವಿಲೀನಗೊಳಿಸಿದ ನಂತರ ಹೊಸ ಚೆಕ್ ಬುಕ್ ಹಾಗೂ ಪಾಸ್ಬುಕ್ ಪಡೆಯುವುದು ಅನಿವಾರ್ಯವಾಗಿದೆ. ಇದ್ರ ಜೊತೆ ಬ್ಯಾಂಕ್ ಶಾಖೆಗಳ ವಿಳಾಸಗಳನ್ನು ಸಹ ಬದಲಾಯಿಸಲಾಗುತ್ತದೆ.
ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ನೊಂದಿಗೆ ವಿಲೀನಗೊಂಡಿವೆ. ನಂತರ ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಂಡಿದೆ. ಎಲ್ಲ ವಿಲೀನ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಮಾಹಿತಿ ರವಾನೆ ಮಾಡುತ್ತಿವೆ. ಮಾರ್ಚ್ 31ರೊಳಗೆ ಹೊಸ ಚೆಕ್ ಬುಕ್, ಪಾಸ್ಬುಕ್ ಪಡೆಯುವಂತೆ ಹೇಳಿವೆ. ಹಳೆ ಚೆಕ್ ಬುಕ್ ಏಪ್ರಿಲ್ 1ರಿಂದ ಕೆಲಸ ಮಾಡುವುದಿಲ್ಲವೆಂದು ಹೇಳಿವೆ.
ವಿಲೀನವಾಗ್ತಿರುವ ಯಾವುದೇ ಬ್ಯಾಂಕ್ ಗ್ರಾಹಕರಾಗಿದ್ದರೂ, ಮೊಬೈಲ್ ಸಂಖ್ಯೆ, ವಿಳಾಸ, ನಾಮಿನಿಯ ಹೆಸರು ಇತ್ಯಾದಿಗಳಂತಹ ವಿವರಗಳನ್ನು ನವೀಕರಿಸಬೇಕಾಗುತ್ತದೆ. ಬ್ಯಾಂಕುಗಳು ವಿಲೀನಗೊಂಡ ಬ್ಯಾಂಕಿನಿಂದ ಹೊಸ ಚೆಕ್‌ಬುಕ್ ಮತ್ತು ಪಾಸ್‌ಬುಕ್ ಪಡೆಯಬೇಕಾಗುತ್ತದೆ. ಹೊಸ ಚೆಕ್‌ಬುಕ್ ಮತ್ತು ಪಾಸ್‌ಬುಕ್ ಪಡೆಯುವವರೆಗೆ ಹಳೆಯ ಪಾಸ್‌ಬುಕ್ ಮತ್ತು ಚೆಕ್‌ಬುಕ್ ನಿಮ್ಮ ಬಳಿ ಇರಬೇಕು. ಹೊಸ ಚೆಕ್‌ಬುಕ್ ಮತ್ತು ಪಾಸ್‌ಬುಕ್ ಪಡೆದ ನಂತರ ವಿವಿಧ ಹಣಕಾಸು ಸೇವೆಗಳಲ್ಲಿ ನವೀಕರಣ ಮಾಡಲಾಗುತ್ತದೆ. ಮ್ಯೂಚುಯಲ್ ಫಂಡ್‌ಗಳು, ಜೀವ ವಿಮಾ ಪಾಲಿಸಿಗಳು, ಆದಾಯ ತೆರಿಗೆ ಖಾತೆಗಳ ಖಾತೆ ವಿವರ ಬದಲಾಗುತ್ತದೆ.