ಮಕ್ಕಳನ್ನ ಖುಷಿಯಾಗಿ ಇಡಬೇಕು ಅಂದರೆ ಪೋಷಕರು ಅಬ್ಬಬ್ಬಾ ಅಂದರೆ ಯಾವ್ಯಾವ ಸಾಹಸಗಳನ್ನ ಮಾಡಬಹುದು..? ಅಮೆರಿಕದ ವ್ಯಕ್ತಿಯೊಬ್ಬ ತನ್ನ ಮಗುವಿನ ಹಾಸಿಗೆ ಬಳಿ ಇಡೋಕೆ ಅಂತಾ ಮಕ್ಕಳ ಪಾರ್ಕ್ನಿಂದ ಹೆಚ್ಚು ಕಡಿಮೆ 182 ಕೆಜಿ ತೂಕದ ಜಾರು ಬಂಡಿಯನ್ನ ಕದ್ದು ಮನೆಗೆ ತಂದಿದ್ದಾನೆ..!
ವಾಷಿಂಗ್ಟನ್ನ ಪಾಸ್ಕೋ ಪೊಲೀಸರು ಫೇಸ್ಬುಕ್ ಪೋಸ್ಟ್ ಮೂಲಕ ಈ ಕಳ್ಳತನದ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
30 ವರ್ಷ ವಯಸ್ಸಿನ ಡಸ್ಟಿನ್ ಬಶ್ನೆಲ್ ಎಂಬ ವ್ಯಕ್ತಿಯನ್ನ ಜಾರು ಬಂಡಿ ಕದ್ದ ಆರೋಪದಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಟೆರ್ರಾ ವಿಡಾದಲ್ಲಿರುವ ಉದ್ಯಾನವನದಲ್ಲಿ ಇದ್ದ 181 ಕೆಜಿ ತೂಕದ ಜಾರುಬಂಡಿಯನ್ನ ಕದ್ದು ಮನೆಯಲ್ಲಿ ತನ್ನ ಮಗುವಿನ ಬೆಡ್ ಬಳಿ ಜೋಡಿಸಿದ್ದಾರೆ. ಈ ಪ್ರಕರಣ ಭೇದಿಸಿದ ಪೊಲೀಸರು ಮಾರ್ಚ್ 10 ರಂದು ಆರೋಪಿಯನ್ನ ಬಂಧಿಸಿದ್ದಾರೆ.
ಜಾರು ಬಂಡಿಯನ್ನ ಗರಗಸದಿಂದ ಕೊಂಚ ಕತ್ತರಿಸಿ ತಮ್ಮ ಮಗುವಿನ ಬಂಕರ್ ಹಾಸಿಗೆಯಿಂದ ಕೆಳಗೆ ಜಾರಲು ಸೂಕ್ತವಾಗುವಂತ ರೀತಿಯಲ್ಲಿ ಇಡಲಾಗಿದೆ. ಈ ಫೇಸ್ಬುಕ್ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
https://www.facebook.com/pasco.police/photos/a.744475392317572/3567061813392235/?type=3