ಕೇಂದ್ರ ಸರ್ಕಾರ ಹಲವು ಬ್ಯಾಂಕುಗಳ ವಿಲೀನ ಮಾಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ಕೆಲ ಬ್ಯಾಂಕುಗಳ ವಿಲೀನವಾಗಿದ್ದರೆ, ಬ್ಯಾಂಕ್ ಆಫ್ ಬರೋಡಾ ಜೊತೆ ವಿಜಯ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ ವಿಲೀನವಾಗಿದ್ದವು.
ಕಾರ್ಪೊರೇಷನ್ ಬ್ಯಾಂಕ್, ಆಂಧ್ರ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಯುನೈಟೆಡ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್ ಸೇರಿ ಹೀಗೆ ಏಳು ಬ್ಯಾಂಕುಗಳ ವಿಲೀನಗೊಂಡಿದ್ದವು.
ಪ್ರವಾಸಿ ವಾಹನ ಮಾಲೀಕರು, ಆಪರೇಟರ್ ಗಳಿಗೆ ಗುಡ್ ನ್ಯೂಸ್
ಈ ಬ್ಯಾಂಕುಗಳ ಗ್ರಾಹಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದ್ದು, ಇವುಗಳ ಐಎಫ್ಎಸ್ಸಿ ಕೋಡ್ ಈಗಾಗಲೇ ಬದಲಾಗಿದೆ. ಆದರೆ ಪ್ರಸ್ತುತ ಹಳೆ ಐಎಫ್ಎಸ್ಸಿ ಕೋಡ್ ಮೇಲೆ ಹಣ ವರ್ಗಾವಣೆಗೆ ಅವಕಾಶ ಮಾಡಿಕೊಡುತ್ತಿದ್ದು, ಇದು ಮಾರ್ಚ್ 31ಕ್ಕೆ ಕೊನೆಗೊಳ್ಳಲಿದೆ.
ಹೀಗಾಗಿ ಗ್ರಾಹಕರುಗಳು ಏಪ್ರಿಲ್ 1ರಿಂದ ಹೊಸ ಐಎಫ್ಎಸ್ಸಿ ಕೋಡ್ ಬಳಸಬೇಕಾಗುತ್ತಲ್ಲದೆ. ಚೆಕ್ ಬುಕ್ ಸಹ ಬದಲಾಗಲಿದ್ದು, ಹೀಗಾಗಿ ಗ್ರಾಹಕರು ಹೊಸ ಚೆಕ್ ಬುಕ್ ಪಡೆದುಕೊಳ್ಳಬೇಕಾಗುತ್ತದೆ. ಹಳೆ ಚೆಕ್ ಮಾನ್ಯಗೊಳ್ಳುವುದಿಲ್ಲ ಎಂದು ಹೇಳಲಾಗಿದೆ.