alex Certify DL ಗೆ ‘ಆಧಾರ್’​ ಲಿಂಕ್​ ಮಾಡುವ ಕುರಿತು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

DL ಗೆ ‘ಆಧಾರ್’​ ಲಿಂಕ್​ ಮಾಡುವ ಕುರಿತು ಇಲ್ಲಿದೆ ಮಾಹಿತಿ

ವಾಹನ ಚಾಲಕರ ಸುರಕ್ಷತಾ ದೃಷ್ಟಿಯಿಂದ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಎಲ್ಲಾ ಚಾಲಕರ ವಾಹನ ಪರವಾನಿಗೆಯ ಜೊತೆ ಆಧಾರ್​​ ಕಾರ್ಡ್​ನ್ನು ಲಿಂಕ್​ ಮಾಡುವಂತೆ ಸೂಚನೆ ನೀಡಿದೆ. ರಸ್ತೆ ಅಪಘಾತದ ಸಂದರ್ಭದಲ್ಲಿ ಸಂತ್ರಸ್ತರನ್ನ ಹಾಗೂ ಆರೋಪಿಗಳನ್ನ ಹುಡುಕೋಕೆ ಇದರಿಂದ ತುಂಬಾನೇ ನೆರವಾಗಲಿದೆ.

ವಾಹನ ಪರವಾನಿಗೆಯ ಜೊತೆ ಆಧಾರ್ ಕಾರ್ಡ್​ ಲಿಂಕ್​​​ ಮಾಡಲು ಇಲ್ಲಿದೆ ಮಾಹಿತಿ :

ರಾಜ್ಯ ರಸ್ತೆ ಸಾರಿಗೆ ಇಲಾಖೆಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ

ಈಗ ‘ಲಿಂಕ್​ ಆಧಾರ್​’ ಆಯ್ಕೆ ಮೇಲೆ ಕ್ಲಿಕ್​ ಮಾಡಿ

ಇಲ್ಲಿ ‘ಡ್ರೈವಿಂಗ್​ ಲೈಸೆನ್ಸ್’ ಆಯ್ಕೆ ಮೇಲೆ ಸೆಲೆಕ್ಟ್ ಮಾಡಿ

ಡ್ರೈವಿಂಗ್​ ಲೈಸೆನ್ಸ್​ ಸಂಖ್ಯೆಯನ್ನ ನಮೂದಿಸಿ ಹಾಗೂ ಗೆಟ್​ ಡಿಟೇಲ್ಸ್ ಆಯ್ಕೆ ಮೇಲೆ ಕ್ಲಿಕ್​ ಮಾಡಿ

ಈಗ 12 ಸಂಖ್ಯೆಯ ಆಧಾರ್ ನಂಬರ್​ ಹಾಗೂ ಮೊಬೈಲ್​ ನಂಬರ್​ನ್ನು ನಮೂದಿಸಿ

ಎಲ್ಲಾ ದಾಖಲೆಗಳನ್ನ ಸಲ್ಲಿಸಿದ ಬಳಿಕ ಸಬ್​​ಮಿಟ್​​ ಆಯ್ಕೆಯನ್ನ ಒತ್ತಿರಿ

ನಿಮ್ಮ ರಿಜಿಸ್ಟರ್ಡ್ ಮೊಬೈಲ್​ ಸಂಖ್ಯೆಗೆ ಒಟಿಪಿ ಬರಲಿದೆ. ಈ ಒಟಿಪಿಯನ್ನ ನಮೂದಿಸಿ

ಯಾವುದೇ ಚಾಲಕ ತನ್ನ ವಾಹನ ಪರವಾನಿಗೆಗೆ ಆಧಾರ್​ ಕಾರ್ಡ್​ ನಮೂದಿಸುವಲ್ಲಿ ವಿಫಲನಾದರೆ ಅಂತಹ ವಾಹನ ಪರವಾನಿಗೆಗಳು ನಿಷ್ಕ್ರಿಯಗೊಳ್ಳಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...