ಉದ್ಯಮಿ ಗೌತಮ್ ಅದಾನಿ ತಮ್ಮ ಸಂಪತ್ತನ್ನ 50 ಪ್ರತಿಶತ ಏರಿಕೆ ಮಾಡಿಕೊಂಡ ವಿಚಾರವಾಗಿ ವಯ್ನಾಡ್ ಸಂಸದ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
2020ರಲ್ಲಿ ನಿಮ್ಮೆಲ್ಲರ ಆಸ್ತಿ ಎಷ್ಟು ಹೆಚ್ಚಾಗಿದೆ..? ನೀವೆಲ್ಲ ಬದುಕೋಕೂ ಕಷ್ಟ ಪಡ್ತಾ ಇದ್ದರೆ ಗೌತಮ್ ಅದಾನಿ ಮಾತ್ರ 12 ಲಕ್ಷ ಕೋಟಿ ಸಂಪಾದಿಸಿದ್ದಾರೆ. ಇದು ಯಾಕೆ ಎಂದು ಹೇಳೋಕೆ ಸಾಧ್ಯವಾ ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.
ಬ್ಲೂಮ್ಬರ್ಗ್ ಬಿಲಿಯನೇರ್ ಇಂಡೆಕ್ಸ್ ಸೂಚ್ಯಂಕದ ಪ್ರಕಾರ, ಗೌತಮ್ ಅದಾನಿ ಆಸ್ತಿ 2021ರಲ್ಲಿ 16.2 ಬಿಲಿಯನ್ ಡಾಲರ್ನಿಂದ 50 ಬಿಲಿಯನ್ ಡಾಲರ್ಗೆ ಏರಿಕೆ ಕಂಡಿದೆ. ಇದು 2021ರಲ್ಲಿ ವಿಶ್ವದಲ್ಲಿ ಯಾವುದೇ ಶ್ರೀಮಂತ ವ್ಯಕ್ತಿ ಮಾಡದ ಸಂಪತ್ತು ಕ್ರೋಢಿಕರಣವಾಗಿದೆ.