ಕ್ರೆಡಿಟ್ ಕಾರ್ಡ್, ಖರ್ಚು ಮಾಡುವುದನ್ನು ಸುಲಭಗೊಳಿಸಿದೆ. ಜಗತ್ತಿನಾದ್ಯಂತ ಕೋಟ್ಯಾಂತರ ಮಂದಿ ಕ್ರೆಡಿಟ್ ಕಾರ್ಡ್ ಬಳಸಿ ಶಾಪಿಂಗ್ ಮಾಡ್ತಿದ್ದಾರೆ. ಅಮೆರಿಕಾದಲ್ಲಿ ಕ್ರೆಡಿಟ್ ಕಾರ್ಡ್ ಬಗ್ಗೆ ಅಧ್ಯಯನವೊಂದು ನಡೆದಿದೆ. ಇದ್ರಲ್ಲಿ ಕ್ರೆಡಿಟ್ ಕಾರ್ಡ್ ಚಟ ಕೊಕೇನ್ ಚಟದಂತೆ ಎಂಬ ಸಂಗತಿ ಹೊರ ಬಿದ್ದಿದೆ. ಕ್ರೆಡಿಟ್ ಕಾರ್ಡ್ ಬಳಸಿ ಶಾಪಿಂಗ್ ಮಾಡುವವರು ಶಾಪಿಂಗ್ ವ್ಯಸನಿಗಳಾಗ್ತಾರೆಂದು ಹೇಳಲಾಗಿದೆ.
ಅಧ್ಯಯನದ ಪ್ರಕಾರ, ನಗದು ನೀಡಿ ಖರ್ಚು ಮಾಡುವವರು ಅಳೆದು ತೂಗಿ ಹಣ ಖರ್ಚು ಮಾಡ್ತಾರೆ. ಕ್ರೆಡಿಟ್ ಕಾರ್ಡ್ ಬಳಸಿ ಶಾಪಿಂಗ್ ಮಾಡುವವರು ಇದ್ರ ಬಗ್ಗೆ ಆಲೋಚನೆ ಮಾಡುವುದಿಲ್ಲ. ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡ್ತಾರೆ. ಸಂಶೋಧಕ ಪ್ರೊಫೆಸರ್ ಡ್ರೇಜನ್ ಪ್ರಿಲೇಕ್ ಪ್ರಕಾರ, ಮಾನವರ ಮನಸ್ಸಿನಲ್ಲಿ ರಿವಾರ್ಡ್ ನೆಟ್‌ವರ್ಕ್ ಇದೆ. ಉತ್ಪನ್ನದ ಮೇಲೆ ಭಾರಿ ರಿಯಾಯಿತಿ ನೋಡಿದ ನಂತ್ರ ಅದು ಸಕ್ರಿಯವಾಗುತ್ತದೆ. ಇದರ ನಂತರ ವ್ಯಕ್ತಿ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿ ಶುರು ಮಾಡುತ್ತಾನೆಂದು ಅವರು ಹೇಳಿದ್ದಾರೆ.
ಅಧ್ಯಯನದಲ್ಲಿ ನಗದು ಬಳಕೆ ಹಾಗೂ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವವರನ್ನು ಸ್ಟಡಿ ಮಾಡಲಾಗಿದೆ. ಮೊದಲು ಅಗತ್ಯ ವಸ್ತುಗಳ ಖರೀದಿಗೆ, ನಂತ್ರ ಹವ್ಯಾಸದ ವಸ್ತು ಖರೀದಿಗೆ ಬಳಕೆಯಾಗ್ತಿದ್ದ ಕ್ರೆಡಿಟ್ ಕಾರ್ಡ್ ಈಗ ಚಟವಾಗ್ತಿದೆ ಎಂದವರು ಹೇಳಿದ್ದಾರೆ.