ಅಮೆರಿಕಾದ ಲಾಸ್ ಏಂಜಲೀಸ್ ನ ಕೋರ್ಟ್ ಒಂದು ವ್ಯಕ್ತಿಗೆ 212 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದು ಈವರೆಗೆ ಅಪರಾಧಿಗೆ ನೀಡಿದ ಅತಿ ಹೆಚ್ಚು ವರ್ಷಗಳ ಶಿಕ್ಷೆಯಾಗಿದೆ. 212 ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲು ಕಾರಣ ಕೇಳಿದ್ರೆ ದಂಗಾಗುತ್ತೆ. ಅಪರಾಧಿ ತನ್ನಿಬ್ಬರು ಮಕ್ಕಳ ಹತ್ಯೆ ಮಾಡಿದ್ದಾನೆ.
13 ವರ್ಷ ಹಾಗೂ 8 ವರ್ಷದ ಮಕ್ಕಳನ್ನು ಈತ ಹತ್ಯೆ ಮಾಡಿದ್ದ. 22 ಕೋಟಿ ರೂಪಾಯಿ ವಿಮೆ ಪಡೆಯಲು ವ್ಯಕ್ತಿ ತನ್ನಿಬ್ಬರು ಮಕ್ಕಳ ಹತ್ಯೆ ಮಾಡಿದ್ದಾನೆ. ಅಪರಾಧಿ ಘಟನೆಯನ್ನು ಅಪಘಾತವೆಂದು ನಂಬಿಸಲು ಪ್ರಯತ್ನಿಸಿದ್ದ.
ಆರೋಪಿ ಹೆಸರು ಅಲಿ ಎಲ್ಮೆಜಯನ್. ಈತ ಈಜಿಪ್ಟ್ ಪ್ರಜೆ. 2015ರಲ್ಲಿ ಮಕ್ಕಳಿಬ್ಬರು ಹಾಗೂ ಮಾಜಿ ಪತ್ನಿ ಜೊತೆ ಕಾರಿನಲ್ಲಿ ಹೋಗಿದ್ದ ಅಲಿ, ಕಾರನ್ನು ಬಂದರಿನ ನೀರಿಗೆ ತಳ್ಳಿದ್ದ. ಕಾರ್ ನಿಂದ ಹೊರ ಬರಲು ಅಲಿ ಯಶಸ್ವಿಯಾಗಿದ್ದ. ಪತ್ನಿಯನ್ನು ಮೀನುಗಾರನೊಬ್ಬ ರಕ್ಷಿಸಿದ್ದ. ಆದ್ರೆ ಮಕ್ಕಳಿಬ್ಬರು ಸಾವನ್ನಪ್ಪಿದ್ದರು.
ಅಪಘಾತದ ನಂತ್ರ ವಿಮೆ ಕಂಪನಿಯಿಂದ 1 ಕೋಟಿ 88 ಲಕ್ಷ ರೂಪಾಯಿ ಪಡೆದಿದ್ದ. ಈ ಹಣದಿಂದ ಈಜಿಪ್ಟ್ ನಲ್ಲಿ ದೋಣಿ ಹಾಗೂ ಭೂಮಿ ಖರೀದಿ ಮಾಡಿದ್ದ. ಆರೋಪ ಸಾಬೀತಾಗ್ತಿದ್ದಂತೆ ಕೋರ್ಟ್ ಶಿಕ್ಷೆ ಜೊತೆಗೆ 1 ಕೋಟಿ 90 ಲಕ್ಷ ರೂಪಾಯಿಯನ್ನು ವಿಮೆ ಕಂಪನಿಗೆ ವಾಪಸ್ ನೀಡುವಂತೆ ಹೇಳಿದೆ.