ಹೊಸ ಪಾನ್ ಕಾರ್ಡ್ನ್ನು ಪಡೆಯಬೇಕು ಅಂದರೆ ಅರ್ಜಿ ತುಂಬಿ ಹೊಸ ಪಾನ್ ಕಾರ್ಡ್ಗಾಗಿ ಕಾಯಬೇಕಾದ ಅವಶ್ಯಕತೆ ಇಲ್ಲ. ಐಟಿ ಇಲಾಖೆ ಈ ಸಂಬಂಧ ಹೊಸ ಸೌಲಭ್ಯವೊಂದನ್ನ ಪರಿಚಯಿಸಿದ್ದು, ಇದರನ್ವಯ ಆಧಾರ್ ಕಾರ್ಡ್ ಹೊಂದಿರುವ ಯಾವುದೇ ವ್ಯಕ್ತಿ ಕೆಲವೇ ನಿಮಿಷಗಳಲ್ಲಿ ಪಾನ್ ಕಾರ್ಡ್ನ್ನು ಪಡೆಯಬಹುದಾಗಿದೆ.
ಪಾನ್ ಕಾರ್ಡ್ ಸಂಖ್ಯೆಯು ಕೇವಲ 10 ನಿಮಿಷಗಳಲ್ಲಿ ನಿಮಗೆ ಪಿಡಿಎಫ್ ಕಾಪಿಯ ರೂಪದಲ್ಲಿ ಸಿಗಲಿದೆ.
ಪಾನ್ ಕಾರ್ಡ್ನ್ನು ಪಡೆಯಲು ನೀವು ಇ ಫಿಲ್ಲಿಂಗ್ ಪೋರ್ಟಲ್ನಲ್ಲಿ ಇನ್ಸ್ಟಂಟ್ ಪಾನ್ ಥ್ರೂ ಆಧಾರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಇದಾದ ಬಳಿಕ ಗೆಟ್ ನ್ಯೂ ಪಾನ್ ಆಯ್ಕೆಯನ್ನ ಆರಿಸಿಕೊಳ್ಳಿ. ಈಗ ನಿಮ್ಮ ಬಳಿ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿಯನ್ನ ಕೇಳಲಾಗುತ್ತೆ.
ಈ ಒಟಿಪಿಯನ್ನ ನಮೂದಿಸಿದ ಬಳಿಕ ಪಾನ್ ಕಾರ್ಡ್ ಸಂಖ್ಯೆ ಗೋಚರವಾಗಲಿದೆ.