ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಕೊರೊನಾ ಸೋಂಕಿಗೆ ಒಳಗಿದ್ದು ಈ ಬಗ್ಗೆ ಇನ್ಸ್ಟಾಗ್ರಾಂ ವಿಡಿಯೋ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ದೆಹಲಿ ಆಸ್ಪತ್ರೆಯಲ್ಲಿ ಚೆಕಪ್ ಮಾಡಿಸಿಕೊಳ್ತಿರೋದಾಗಿ ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ. ಸದ್ಯ ತಾವು ಯಾವುದೇ ರೋಗ ಲಕ್ಷಣಗಳನ್ನ ಹೊಂದಿಲ್ಲ ಎಂದು ವಿಡಿಯೋದಲ್ಲಿ ಆಶಿಶ್ ವಿದ್ಯಾರ್ಥಿ ಹೇಳಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಟ ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಶೇರ್ ಮಾಡಿದ್ದು, ಇದೊಂದು ಧನಾತ್ಮಕ ಅಂಶವನ್ನ ನಾನು ಜೀವನದಲ್ಲಿ ಬಯಸಿರಲಿಲ್ಲ ಎಂದು ಶೀರ್ಷಿಕೆ ನೀಡಿದ್ದಾರೆ. ಯಾರಾದರೂ ನನ್ನೊಂದಿಗೆ ಸಂಪರ್ಕಕ್ಕೆ ಬಂದಿದ್ದಲ್ಲಿ ದಯವಿಟ್ಟು ಪರೀಕ್ಷೆ ಮಾಡಿಸಿಕೊಳ್ಳಿ. ನಾನು ಈಗ ರೋಗ ಲಕ್ಷಣಗಳಿಂದ ಮುಕ್ತನಾಗಿದ್ದೇನೆ. ಎಲ್ಲವೂ ಸರಿಯಾಗುತ್ತೆ ಎಂಬ ನಂಬಿಕೆ ಇದೆ. ನಿಮ್ಮ ಪ್ರೀತಿ ಹಾಗೂ ಹಾರೈಕೆಗೆ ಎಂದಿಗೂ ಆಭಾರಿ ಎಂದು ಬರೆದುಕೊಂಡಿದ್ದಾರೆ.
ಸದಾ ನೆಗೆಟಿವ್ ರೋಲ್ ಮೂಲಕವೇ ಅಭಿಮಾನಿಗಳನ್ನ ಸೆಳೆದಿರುವ ನಟ ಆಶಿಶ್ ವಿದ್ಯಾರ್ಥಿ, ಕನ್ನಡ, ಹಿಂದಿ, ತೆಲಗು, ಮಲಯಾಳಂ ಹಾಗೂ ಬಂಗಾಳಿ ಭಾಷೆಗಳಲ್ಲಿ ನಟಿಸಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಆನಂದ್, ಏಕೆ 47, ಕೋಟಿಗೊಬ್ಬ, ವಂದೇ ಮಾತರಂ, ಸೈನಿಕ ಸೇರಿದಂತೆ ಇನ್ನೂ ಹಲವು ಸಿನಿಮಾಗಳು ಆಶಿಶ್ ವಿದ್ಯಾರ್ಥಿಗೆ ಹೆಸರು ತಂದುಕೊಟ್ಟ ಸಿನಿಮಾಗಳಾಗಿವೆ.
https://www.instagram.com/p/CMT9iLRjLMb/?utm_source=ig_web_copy_link