alex Certify ವಿಮಾ ಹಣಕ್ಕಾಗಿ ಕುಟುಂಬವನ್ನು ನೀರಲ್ಲಿ ಮುಳುಗಿಸಿದವನಿಗೆ 212 ವರ್ಷ ಜೈಲು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾ ಹಣಕ್ಕಾಗಿ ಕುಟುಂಬವನ್ನು ನೀರಲ್ಲಿ ಮುಳುಗಿಸಿದವನಿಗೆ 212 ವರ್ಷ ಜೈಲು….!

Man Sentenced to 212 Years of Prison in US for Killing Wife and Son to Collect Insurance Payout

ಇದೊಂದು ವಿಚಿತ್ರ ಘಟನೆ. ತನ್ನ ಕುಟುಂಬದ ರಕ್ಷಣೆಗಾಗಿ, ಭವಿಷ್ಯಕ್ಕಾಗಿ ಮನೆ ಯಜಮಾನ ವಿಮೆ ಮಾಡಿಸುವುದು ಸಾಮಾನ್ಯ ಸಂಗತಿ. ಆದರೆ ಇಲ್ಲೊಬ್ಬ ಖತರ್ನಾಕ್ ವ್ಯಕ್ತಿ ವಿಮಾ ಹಣದ ಆಸೆಗೆ ತನ್ನ ಕುಟುಂಬಕ್ಕೆ ಖೆಡ್ಡಾತೋಡಿ ಸಿಕ್ಕಿಬಿದ್ದು, 212 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದಾನೆ.

ಅಲಿ ಎಫ್ ಎಲ್ಮೆಜಾಯೆನ್ ಎಂಬ 45 ವರ್ಷದ ವ್ಯಕ್ತಿ ಲಾಸ್ ಏಂಜಲೀಸ್ ನಲ್ಲಿ ಈ ದೀರ್ಘಾವಧಿಯ ಶಿಕ್ಷೆಗೆ ಒಳಗಾಗಿದ್ದಾನೆ.

2012-13ರ ನಡುವೆ ಆತ ತನ್ನ ಕುಟುಂಬದ ಮೇಲೆ ಮೂರು ಮಿಲಿಯನ್‌ಗಿಂತ ಹೆಚ್ಚು ಮೌಲ್ಯದ ಜೀವ ವಿಮೆ ಮಾಡಿಸಿದ್ದ. 2015ರಲ್ಲಿ ಕಾರನ್ನು ನೀರಲ್ಲಿ ಮುಳುಗಿಸಿ ತನ್ನ ಕುಟುಂಬವನ್ನೇ ಹತ್ಯೆ ಮಾಡಿದ ಆರೋಪ ಹೊರಿಸಲಾಗಿತ್ತು.

ತಡರಾತ್ರಿ ದುಡುಕಿನ ನಿರ್ಧಾರ: ಒಂದೇ ಕುಟುಂಬದ ಐವರ ಆತ್ಮಹತ್ಯೆ –ಸಾವಿನ ಕುರಿತು ಅನುಮಾನ

2015ರ ಏಪ್ರಿಲ್ 9ರಂದು ಲಾಸ್ ಏಂಜಲೀಸ್ ಬಂದರಿನ ಸ್ಯಾನ್ ಪೆಡ್ರೊ ಪ್ರದೇಶದಲ್ಲಿ ಎಲ್ಮೆಜಾಯೆನ್ ತನ್ನ ಮಾಜಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರಲ್ಲಿ ತೆರಳಿದ್ದ. ಆತ ಚಾಲಕನ ಪಕ್ಕದ ಕಿಟಕಿಯ ಮೂಲಕ ಹೊರಬಂದಿದ್ದು ಮತ್ತು ಈಜಲು ಸಾಧ್ಯವಾಗದ ಅವನ ಮಾಜಿ ಪತ್ನಿ ಮೀನುಗಾರನ ಸಹಾಯದಿಂದ ರಕ್ಷಿಸಲ್ಪಟ್ಟಳು. 8 ಮತ್ತು 13 ವರ್ಷ ವಯಸ್ಸಿನ ಮಕ್ಕಳು ಮಾತ್ರ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಎಲ್ಮೆಜಾಯೆನ್ ಮಕ್ಕಳ ಹೆಸರಲ್ಲಿ ತೆಗೆದುಕೊಂಡ ಪಾಲಿಸಿಗಳ ಮೇಲೆ ಎರಡು ಕಂಪನಿಗಳಿಂದ ದೊಡ್ಡ ಮೊತ್ತದ ವಿಮಾ ಹಣ ಪಡೆದು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿ, ಸ್ವಲ್ಪ ಹಣ ಬಳಸಿದ್ದ ಎಂದು ದೂರುದಾರರು ತಿಳಿಸಿದ್ದಾರೆ.

ಈ ಪ್ರಕರಣದ ತೀರ್ಪು ನೀಡಿದ ಯುಎಸ್ ಜಿಲ್ಲಾ ನ್ಯಾಯಾಧೀಶ ಜಾನ್ ಆರ್ ವಾರ್ಡರ್, ಆರೋಪಿಯು ನುರಿತ ಸುಳ್ಳುಗಾರ ಮತ್ತು ದುರಾಸೆ, ಕ್ರೂರ ಕೊಲೆಗಾರ ನಲ್ಲದೆ ಮತ್ತೇನೂ ಅಲ್ಲ ಎಂದು ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...