ಇದೊಂದು ಇಂಟರೆಸ್ಟಿಂಗ್ ಆಟಿಕೆ ಕಥೆ. ಏರ್ಲೈನ್ಸ್ ಒಂದರ ಸಿಬ್ಬಂದಿ ತಮ್ಮ ವಿಮಾನದಲ್ಲಿ ಮಗುವೊಂದು ಆಕಸ್ಮಿಕವಾಗಿ ಬಿಟ್ಟುಹೋಗಿದ್ದ ಆಟಿಕೆಯನ್ನು ಪುನಹ ಮಗುವಿಗೆ ತಲುಪಿಸುವಲ್ಲಿ ಯಶಸ್ವಿಯಾಗಿ ಗಮನಸೆಳೆದಿದ್ದಾರೆ.
7 ತಿಂಗಳ ಗರ್ಭಿಣಿ ತಾಯಿಯೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಹ್ಯಾಗನ್ ಎಂಬ ಬಾಲಕ ತನ್ನ ನೆಚ್ಚಿನ ಆಟಿಕೆ ಬುಜ್ ಲೈಟ್ ಇಯರ್ ನ್ನು ವಿಮಾನದಲ್ಲಿ ಬೀಳಿಸಿಕೊಂಡಿದ್ದ.
ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹ್ಯಾಗನ್ ಕುಟುಂಬ ಕ್ಯಾಲಿಫೋರ್ನಿಯಾದಿಂದ ಟೆಕ್ಸಾಸ್ ಗೆ ಪ್ರಯಾಣಿಸುತ್ತಿತ್ತು. ಆತುರದಲ್ಲಿ ಮಗು ವಿಮಾನದಲ್ಲಿ ಆಟಿಕೆ ಬೀಳಿಸಿಕೊಂಡಿದ್ದು ಪೋಷಕರು ಸಹ ಗಮನಿಸಿರಲಿಲ್ಲ.
ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾದವರಿಗೆ ಕಾನೂನು ಹಕ್ಕು ತಿಳಿಸಲು ಸುಪ್ರೀಂ ಸೂಚನೆ
ಮಗುವಿನ ತಾಯಿಗೆ ಆಟಿಕೆ ಕಳೆದುಕೊಂಡಿದ್ದು ಕಾರು ಹತ್ತಿದ ನಂತರವೇ ಅರಿವಿಗೆ ಬಂದಿತ್ತು. ಇಷ್ಟರಲ್ಲಾಗಲೇ ಅವರು ಪ್ರಯಾಣಿಸಿದ್ದ ಸೌತ್ ವೆಸ್ಟ್ ಏರ್‌ಲೈನ್ಸ್ ನ ರಾಂಪ್ ಏಜೆಂಟ್ ಆಟಿಕೆ ಗಮನಿಸಿ ಅದನ್ನು ಹೇಗೆ ವಾಪಸ್ ತಲುಪಿಸುವುದು ಎಂದು ಪ್ರಯತ್ನಶೀಲನಾಗಿದ್ದ.
ಕೊನೆಗೂ ಇದು ಹ್ಯಾಗನ್‌ಗೆ ಸಂಬಂಧಿಸಿದ ಆಟಿಕೆ ಎಂದು ಕಂಡುಕೊಂಡ ಏರ್ ಲೈನ್ಸ್ ಅದನ್ನು ವಾಪಸ್ ತಲುಪಿಸಲು ಪ್ರಯತ್ನಿಸಿತು. ಅಂದವಾಗಿ ಪ್ಯಾಕ್ ಮಾಡಿದ ಪತ್ರ ಸಹಿತ ಆಟಿಕೆ ಇದ್ದ ಪಾರ್ಸೆಲ್ ಹ್ಯಾಗನ್ ಗೆ ತಲುಪಿಸಲಾಯಿತು. ಇಡೀ ವೃತ್ತಾಂತವನ್ನು ಹ್ಯಾಗನ್ ತಾಯಿ ಮತ್ತು ಏರ್‌ಲೈನ್ಸ್ ಸಂಸ್ಥೆ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಕಂಡು ನೆಟ್ಟಿಗರು ಖುಷಿಪಟ್ಟಿದ್ದಾರೆ.
https://www.facebook.com/SouthwestAir/photos/a.101878958948/10159660434083949/?type=3
https://www.facebook.com/SouthwestAir/photos/a.101878958948/10159660434023949/?type=3
https://www.facebook.com/SouthwestAir/posts/10159660434243949
https://www.facebook.com/ashley.trillo/videos/4070374709640801/?t=2