ಇಂದು ಮಾಘ ಅಮಾವಾಸ್ಯೆ ಬಂದಿದೆ. ಹಾಗೇ ಇದು ಶನಿವಾರ ಬಂದಿದ್ದರಿಂದ ಇದನ್ನು ಶನಿ ಅಮಾವಾಸ್ಯೆ ಎನ್ನುತ್ತಾರೆ. ಇಂತಹ ವಿಶೇಷವಾದ ದಿನದಂದು ನೀವು ಸ್ನಾನ ಮಾಡುವಂತಹ ನೀರಿಗೆ ಈ ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿದ್ದರೆ ಜನ್ಮ ಜನ್ಮಗಳ ಪಾಪಕರ್ಮಗಳು ಕಳೆಯುತ್ತವೆ. ಆರೋಗ್ಯ ವೃದ್ಧಿಯಾಗುತ್ತದೆ.
ಸಕಲ ಪಾಪಗಳನ್ನು ಕಳೆಯುವ ಮಾಸವೆಂದರೆ ಅದು ಮಾಘ ಮಾಸ. ಇಂದು ಪಿತೃಗಳಿಗೆ ತರ್ಪಣವನ್ನು ನೀಡಿ. ಇದರಿಂದ ಪಿತೃಗಳ ದೋಷ ಕಳೆದು ಅವರ ಅನುಗ್ರಹದಿಂದ ಜೀವನದಲ್ಲಿ ಏಳಿಗೆಯಾಗುತ್ತದೆ.
ನಿಮಗೂ ಮೇಲಿಂದ ಕೆಳಗೆ ಬಿದ್ದಂತೆ ಕನಸು ಕಾಣುತ್ತಾ…?
ಹಾಗೇ ಇಂದು ಸ್ನಾನ ಮಾಡುವಾಗ ಗಂಗೆಯ ಹೆಸರನ್ನು 3 ಬಾರಿ ಜಪಿಸಿ ತಲೆಯ ಮೇಲೆ ನೀರು ಹಾಕಿಕೊಂಡರೆ ಗಂಗೆಯಲ್ಲಿ ಮಿಂದ ಪುಣ್ಯ ಫಲ ಲಭಿಸುತ್ತದೆ. ಹಾಗೇ ಸ್ನಾನ ಮಾಡುವ ನೀರಿಗೆ ಕಪ್ಪು ಎಳ್ಳು, ತುಳಸಿ ಎಲೆ ಮತ್ತು ಕಲ್ಲುಪ್ಪನ್ನು ಬೆರೆಸಿ ಸ್ನಾನ ಮಾಡಿದರೆ ಅನಾರೋಗ್ಯ ಸಮಸ್ಯೆ ದೂರವಾಗುತ್ತದೆ.