ಆರೋಗ್ಯಕ್ಕೆ ಪೂರಕವಾದ ಸಿರಿಧಾನ್ಯಕ್ಕೆ ಈಗ ಜಾಗತಿಕ ಮನ್ನಣೆ ದೊರೆತಿದ್ದು, ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ 2023 ನ್ನು ‘ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ವನ್ನಾಗಿ ಆಚರಿಸುವ ಕುರಿತು ಘೋಷಣೆ ಮಾಡಿದೆ.
ಮಹತ್ವದ ಸಂಗತಿಯೆಂದರೆ ಇದಕ್ಕೆ ಕಾರಣವಾಗಿದ್ದು ಕರ್ನಾಟಕ. 2017 – 18 ರಲ್ಲಿ ಕೃಷಿ ಸಚಿವರಾಗಿದ್ದ ಕೃಷ್ಣ ಬೈರೇಗೌಡ, ಕೇಂದ್ರ ಸರ್ಕಾರಕ್ಕೆ ಈ ಕುರಿತು ಪ್ರಸ್ತಾವನೆ ಸಲ್ಲಿಸಿದ್ದರ ಜೊತೆಗೆ ರೋಮ್ ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಸಿರಿಧಾನ್ಯಗಳ ಮಹತ್ವ ವಿವರಿಸಿದ್ದಲ್ಲದೇ ಸಿರಿಧಾನ್ಯಗಳ ವರ್ಷಾಚರಣೆ ಘೋಷಣೆಗೆ ಮನವಿ ಮಾಡಿದ್ದರು.
ಚುನಾವಣಾ ಆಯುಕ್ತ ಹುದ್ದೆ ಕುರಿತಂತೆ ‘ಸುಪ್ರೀಂ’ ಮಹತ್ವದ ತೀರ್ಪು
ಅಂದಿನ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರ ಪ್ರಸ್ತಾವನೆಯನ್ನು ಅನುಮೋದಿಸಿದ್ದ ಕೇಂದ್ರ ಸರ್ಕಾರ, ಇದನ್ನು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಗೆ ಕಳುಹಿಸಿಕೊಟ್ಟಿತ್ತು. ಇದೆಲ್ಲದರ ಫಲವಾಗಿ ಇದೀಗ 2023 ನ್ನು ‘ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ವನ್ನಾಗಿ ಆಚರಿಸಲು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ ತೀರ್ಮಾನಿಸಿದೆ.