ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾದವರಿಗೆ ಅನಗತ್ಯ ಗರ್ಭಧಾರಣೆಯನ್ನು ಮುಕ್ತಗೊಳಿಸಲು ಬಯಸಿದರೆ ಅವರ ಕಾನೂನು ಹಕ್ಕುಗಳ ಬಗ್ಗೆ ಸಲಹೆ ನೀಡುವ ಮಂಡಳಿ ಸ್ಥಾಪಿಸಲು ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.
ಅತ್ಯಾಚಾರಕ್ಕೊಳಗಾದ ಹಾಗೂ ತಾನು ಬಯಸದ ಗರ್ಭಧಾರಣೆಯಿಂದ ತಳಮಳಗೊಂಡಂತಹವರ ಪರಿಸ್ಥಿತಿಯನ್ನು ಪ್ರಸ್ತಾಪಿಸಿ, ಈ ವಿಷಯದಲ್ಲಿ ಏನಾದರೂ ಮಾಡಬಹುದೇ ಎಂದು ಕೇಂದ್ರ ಸರ್ಕಾರದಿಂದ ನ್ಯಾಯಪೀಠ ಉತ್ತರ ಬಯಸಿದೆ.
ಹರಿಯಾಣದ 14 ವರ್ಷದ ಯುವತಿಯು ತನ್ನ 26 ವಾರಗಳ ಭ್ರೂಣವನ್ನು ತೆಗೆಸಲು ಬಯಸಿದ ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಾಲಯ ಈ ಅಭಿಪ್ರಾಯ ನೀಡಿತು.
ಕಾರ್ಪೊರೇಷನ್ – ಆಂಧ್ರ ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ
ಈ ಪ್ರಕರಣದಲ್ಲಿ ನ್ಯಾಯಾಲಯ ರಚಿಸಿದ್ದ ವೈದ್ಯಕೀಯ ಮಂಡಳಿಯ ಗರ್ಭಧಾರಣೆ ಮುಂದುವರಿದ ಹಂತದಲ್ಲಿರುವುದರಿಂದ ಭ್ರೂಣ ತೆಗೆಸುವುದು ಕಾರ್ಯಸಾಧ್ಯವಲ್ಲ ಎಂದು ವರದಿ ನೀಡಿತ್ತು. ಆಕೆಯ ಪರವಾಗಿ ವಾದ ಮಾಡಿದ ವಕೀಲರು ಗರ್ಭಪಾತ ಮಾಡಿಸುವ ಕೋರಿಕೆಯನ್ನು ಕೈಬಿಟ್ಟರೂ ಸಹ ಭವಿಷ್ಯದಲ್ಲಿ ಇಂತಹ ಸಂದರ್ಭಗಳನ್ನು ಪರಿಹರಿಸಲು ನ್ಯಾಯಾಲಯದಿಂದ ಆದೇಶ ಕೋರಿದ್ದರು.
ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಮತ್ತು ನ್ಯಾಯಮೂರ್ತಿ ಎಸ್. ಬೋಪಣ್ಣ ಅವರ ನ್ಯಾಯಪೀಠ ಇದೀಗ ಕೇಂದ್ರ ಸರ್ಕಾರದಿಂದ ಸ್ಪಷ್ಟನೆ ಬಯಸಿದೆ.