alex Certify ಆಧಾರ್ ಕಾರ್ಡ್ ಹೊಂದಿದವರಿಗೆ ಮತ್ತೊಂದು ಗುಡ್ ನ್ಯೂಸ್: ವರ್ಚುವಲ್ ಐಡಿ ಪಡೆಯಲು ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಧಾರ್ ಕಾರ್ಡ್ ಹೊಂದಿದವರಿಗೆ ಮತ್ತೊಂದು ಗುಡ್ ನ್ಯೂಸ್: ವರ್ಚುವಲ್ ಐಡಿ ಪಡೆಯಲು ಅವಕಾಶ

ಅನೇಕ ಉದ್ದೇಶಗಳಿಗೆ ಬಳಸುವ ಆಧಾರ್ ಕಾರ್ಡ್ ಸಂಖ್ಯೆ ಬಹಿರಂಗಪಡಿಸಲು ಇಚ್ಛಿಸದವರಿಗೆ ಅನುಕೂಲವಾಗುವಂತೆ ವರ್ಚುವಲ್ ಗುರುತನ್ನು ನೀಡಲು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಎಡಿಐ) ನಿರ್ಧರಿಸಿದೆ.

ಇದಕ್ಕಾಗಿ ನಿಮ್ಮ ಆಧಾರ್‌ ಸಂಖ್ಯೆಯೊಂದಿಗೆ ನೋಂದಣಿಗೊಂಡ ಮೊಬೈಲ್ ಸಂಖ್ಯೆ ಮೂಲಕ ನಿಮ್ಮ ವಿಐಡಿಯನ್ನು ಜನರೇಟ್ ಮಾಡಬಹುದಾಗಿದೆ ಎಂದು ಯುಐಡಿಎಐ ಟ್ವೀಟ್ ಮಾಡಿದೆ.

ಏಪ್ರಿಲ್ 2018ರಲ್ಲಿ ಪರಿಚಯಿಸಲಾದ ಈ ಕಾನ್ಸೆಪ್ಟ್‌ ಅಡಿ, ಆಧಾರ್‌ ಕಾರ್ಡ್‌ದಾರರು ಸಿಮ್ ಖಾತ್ರಿ ಸೇರಿದಂತೆ ಹಲವಾರು ಉದ್ದೇಶಗಳಿಗೆ, 12 ಅಂಕಿಯ ಬಯೋಮೆಟ್ರಿಕ್ ಐಡಿಯ ಬದಲಿಗೆ ವರ್ಚುವಲ್ ಐಡಿ ಜನರೇಟ್ ಮಾಡಿಕೊಳ್ಳಬಹುದಾಗಿದೆ. ಪ್ರಜೆಗಳ ವೈಯಕ್ತಿಕ ಹಾಗೂ ಭೌಗೋಳಿಕ ಮಾಹಿತಿಗಳನ್ನು ಇನ್ನಷ್ಟು ಸುರಕ್ಷಿತವಾಗಿ ಇಡಲು ಈ ಹೆಜ್ಜೆಯನ್ನು ಯುಐಎಡಿಐ ಮುಂದಾಗಿದೆ.

16 ಅಂಕಿಯ ಈ ವರ್ಚುವಲ್ ಐಡಿಯನ್ನು, ಮೊಬೈಲ್ ಕಂಪನಿಯಂತಹ ಏಜೆನ್ಸಿಗಳಿಗೆ ಬಳಕೆದಾರರು ಕೊಡಬಹುದಾಗಿದೆ. ಈ ಮೂಲಕ ಮನೆ ವಿಳಾಸ, ಫೋಟೊಗ್ರಾಫ್, ಹೆಸರು ಸೇರಿದಂತೆ ಸೀಮಿತ ಮಾಹಿತಿಯನ್ನು ಖಾತ್ರಿಪಡಿಸಲು ಕೊಡಬಹುದಾಗಿದೆ. ನಿಮ್ಮ ವರ್ಚುವಲ್ ಐಡಿ ಜನರೇಟ್ ಮಾಡಲು ನೀವು https://www.uidai.gov.in ಜಾಲತಾಣಕ್ಕೆ ಭೇಟಿ ಕೊಡಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...