alex Certify BIG NEWS: ರಾಜ್ಯದಲ್ಲಿ BSY ನಾಯಕತ್ವ ಬದಲಾವಣೆ ಸುಳಿವು ನೀಡಿದ್ರಾ ಸದಾನಂದಗೌಡ..? ಕಾಂಗ್ರೆಸ್ ಟಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯದಲ್ಲಿ BSY ನಾಯಕತ್ವ ಬದಲಾವಣೆ ಸುಳಿವು ನೀಡಿದ್ರಾ ಸದಾನಂದಗೌಡ..? ಕಾಂಗ್ರೆಸ್ ಟಾಂಗ್

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಕುರಿತಾಗಿ ಹಿಂದೆ ಭಾರಿ ಚರ್ಚೆಯಾಗಿತ್ತು. ಆದರೆ, ಬಿಜೆಪಿ ವರಿಷ್ಠರು ಗೊಂದಲಕ್ಕೆ ತೆರೆಎಳೆದು ಯಡಿಯೂರಪ್ಪ ನಾಯಕತ್ವದಲ್ಲಿಯೇ ಸರ್ಕಾರ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದ್ದರು.

ಈಗ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ನೀಡಿರುವ ಹೇಳಿಕೆಯೊಂದು ರಾಜಕೀಯ ವಲಯದಲ್ಲಿ ನಾಯಕತ್ವ ಬದಲಾವಣೆ ಕುರಿತಾದ ಚರ್ಚೆಗೆ ಕಾರಣವಾಗುತ್ತಿದೆ. ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಮುಂದಿನ ಮುಖ್ಯಮಂತ್ರಿ ಆಗಲಿ ಎಂದು ಸದಾನಂದ ಗೌಡರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಉಪಮುಖ್ಯಮಂತ್ರಿ ಮುಂದಿನ ಉಪ ಹೋಗಿ ಅಶ್ವತ್ಥ ನಾರಾಯಣ ಮುಖ್ಯಮಂತ್ರಿಯಾಗಲಿ ಎಂದು ಹೇಳಿದ್ದನ್ನು ಕಾಂಗ್ರೆಸ್ ಪ್ರಶ್ನಿಸಿದೆ.

ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಪ್ರಶ್ನೆಗೆ ಉತ್ತರಿಸಲಾಗದೆ ಸಿಎಂ ಸದನದಿಂದ ನಾಪತ್ತೆಯಾಗಿದ್ದರು. ಸದಾನಂದ ಗೌಡರು ಸಿಎಂ ಗಾದಿಗೆ ಅಶ್ವತ್ಥ ನಾರಾಯಣ ಹೆಸರನ್ನು ತೇಲಿ ಬಿಡುತ್ತಿದ್ದಾರೆ. ಯಡಿಯೂರಪ್ಪ ಮುಕ್ತ ಬಿಜೆಪಿ ಸಿದ್ಧತೆ ಜೋರಾಗಿದೆ. ಯಡಿಯೂರಪ್ಪನವರ ಮುಂದಿನ ದಾರಿ ಮಾರ್ಗದರ್ಶಕ ಮಂಡಲವೋ? ಅಥವಾ ಧವಳಗಿರಿಯೋ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...