ಗಿನ್ನೆಸ್ ದಾಖಲೆಯ ಪುಟಕ್ಕೆ ಸೇರಬೇಕು ಅಂದರೆ ನೀವು ಮಾಡುವ ಕಸರತ್ತು ಕೂಡ ಅಷ್ಟೇ ಸವಾಲಿನದ್ದಾಗಿರಬೇಕು.
ಇದೇ ರೀತಿ ವಿಶ್ವ ದಾಖಲೆಯ ಪುಟಕ್ಕೆ ಸೇರಬೇಕೆಂಬ ಆಸೆ ಹೊಂದಿದ್ದ ಫುಟ್ಬಾಲ್ ಆಟಗಾರನೊಬ್ಬ ಫುಟ್ಬಾಲ್ ಹಾಗೂ ಮೂನ್ ವಾಕ್ ಟ್ಯಾಲೆಂಟ್ ಮೂಲಕ ಈ ಕನಸನ್ನ ನನಸು ಮಾಡಿಕೊಂಡಿದ್ದಾನೆ.
ವಿಡಿಯೋದಲ್ಲಿ ಈತ ಮೈಕೆಲ್ ಜಾಕ್ಸನ್ರ ಪ್ರಸಿದ್ಧ ಮೂನ್ವಾಕ್ ಹೆಜ್ಜೆ ಹಾಕ್ತಿರೋದನ್ನ ನೀವು ನೋಡಬಹುದಾಗಿದೆ.
ಟ್ರೇರ್ ತಲೆಯ ಮೇಲೆ ಫುಟ್ಬಾಲ್ ಇಟ್ಟುಕೊಂಡು 32 ಫೀಟ್ ( 10 ಮೀಟರ್)ವರೆಗೆ ಮೂನ್ವಾಕ್ ಮಾಡಿದ್ದಾರೆ. ಈ ವಿಶ್ವ ದಾಖಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
https://www.instagram.com/p/CMM75rhBp2h/?utm_source=ig_web_copy_link